"ಏತಾದೃಶೀ ತವ ಕೃಪಾ ಭಗವಾನ್ (ಚೈ ಚ ಅಂತ್ಯ ೨೦.೧೬), ಚೈತನ್ಯ ಮಹಾಪ್ರಭು ಅವರು ಹೀಗೆಂದು ಬೋಧಿಸುತ್ತಾರೆ 'ಓ ಕೃಷ್ಣಾ, ನೀನು ಎಷ್ಟು ಕರುಣಾಮಯಿ, ನೀನು ನನ್ನ ಬಳಿಗೆ ಕೃಷ್ಣ ಪದದ ಶಬ್ದ ಕಂಪನದಲ್ಲಿ ಬಂದಿರುವೆ. ನಾನು ಬಹಳ ಸುಲಭವಾಗಿ ಜಪಿಸಬಲ್ಲೆ, ಮತ್ತು ನೀವು ನನ್ನೊಂದಿಗೆ ಇರುತ್ತೀರಿ. ಆದರೆ ನಾನು ತುಂಬಾ ದೌರ್ಭಾಗ್ಯದವನಾಗಿದ್ದೇನೆ, ಇದರ ಬಗ್ಗೆಯೂ ನನಗೆ ಆಕರ್ಷಣೆಯಿಲ್ಲ. ನೀವು ಜನರೇ, 'ನೀವು ಕೃಷ್ಣನನ್ನು ಜಪಿಸಿ; ನಿಮಗೆ ಎಲ್ಲವೂ ಸಿಗುತ್ತದೆ' ಎಂದು ನೀವು ಹೇಳುತ್ತೀರಿ, ಅವರು ಅದನ್ನು ನಂಬುವುದಿಲ್ಲ. ನೀವು ಹೇಳಿದರೆ , 'ನೀವು ನಿಮ್ಮ ಮೂಗು ಒತ್ತಿ, ನೀವು ನನಗೆ ಐವತ್ತು ಡಾಲರ್ ಕೊಡಿ, ನಾನು ನಿಮಗೆ ಕೆಲವು ಒಳ್ಳೆಯ ಮಂತ್ರವನ್ನು ನೀಡುತ್ತೇನೆ ಮತ್ತು ಇತ್ಯಾದಿಗಳು. ನಿಮ್ಮ ತಲೆಯನ್ನು ಹೀಗೆ ಮಾಡಿ, (ನಗು) ಕಾಲು ಹೀಗೆ,' 'ಓಹ್,' ಅವರು ಹೇಳುವರು, 'ಇಲ್ಲಿ ಏನೋ' ಇದೆ. ಆದ್ದರಿಂದ, (ನಗು ನಗುತ್ತಾ) 'ಮತ್ತು ಈ ಸ್ವಾಮೀಜಿ ಹೇಳುತ್ತಾರೆ, 'ಕೇವಲ ಕೃಷ್ಣನ ಜಪ ಮಾಡಿ', ಓಹ್, ಏನಿದು ? ' ಆದುದರಿಂದ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ, ಏತಾದೃಶೀ ತವ ಕೃಪಾ ಭಗವಾನ್ ಮಮಾಪಿ ದುರ್ದೈವ (ಚೈ ಚ ಅಂತ್ಯ ೨೦.೧೬): "ಆದರೆ ನಾನು ತುಂಬಾ ದುರದೃಷ್ಟವಂತ, ಈ ಯುಗದಲ್ಲಿ ನೀವು ತುಂಬಾ ಸುಲಭವಾಗಿ ಲಭ್ಯವಾಗಿದ್ದೀರಿ, ಆದರೆ ನಾನು ತುಂಬಾ ದುರದೃಷ್ಟವಂತ, ನಾನು ಅದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ' ಆದ್ದರಿಂದ ಕೃಷ್ಣ ಪ್ರಜ್ಞೆಯು ತುಂಬಾ ಸುಲಭವಾಗಿ ವಿತರಣೆಯಾಗುತ್ತಿದೆ, ಆದರೆ ಅವರು ತುಂಬಾ ದುರದೃಷ್ಟಕರರು, ಅವರು ಸ್ವೀಕರಿಸಲಾಗುತ್ತಿಲ್ಲ. ಸುಮ್ಮನೆ ನೋಡಿ. ಮತ್ತು ನೀವು ಅವರಿಗೆ ಸುಳ್ಳು ಹೇಳಿ, ನೀವು ಅವರನ್ನು ಮೋಸ ಮಾಡಿ - ಅವರು, 'ಆಹ್, ಹೌದು, ಸ್ವಾಗತ. ಹೌದು' ."
|