KN/690511c ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಅಲೆನ್ ಗಿನ್ಸ್‌ಬರ್ಗ್: ಎಲ್‌ಎಸ್‌ಡಿ ಒಂದು ಪ್ರಕೃತಿ ಬಾಂಧವ್ಯವಾಗಿದ್ದರೆ, ಅದು ಯಾವುದು, ಅದು ನನ್ನ ಪ್ರಕಾರ, ಶಬ್ದ, ಶಬ್ದ, ಭೌತಿಕ ಬಾಂಧವ್ಯವೂ ಅಲ್ಲವೇ?
ಪ್ರಭುಪಾದ: ಇಲ್ಲ, ಶಬ್ದ ಆಧ್ಯಾತ್ಮಿಕವಾಗಿದೆ. ಮೂಲತಃ, ಬೈಬಲ್‌ನಲ್ಲಿರುವಂತೆ 'ಸೃಷ್ಟಿಯಾಗಲಿ', ಈ ಶಬ್ದ, ಈ ಆಧ್ಯಾತ್ಮಿಕ ಧ್ವನಿ. ಸೃಷ್ಟಿ. ಸೃಷ್ಟಿ ಇರಲಿಲ್ಲ. ಶಬ್ದವು ಸೃಷ್ಟಿಯನ್ನು ಉಂಟುಮಾಡಿತು. ಆದ್ದರಿಂದ, ಧ್ವನಿಯು ಮೂಲತಃ ಆಧ್ಯಾತ್ಮಿಕವಾಗಿದೆ, ಮತ್ತು ಧ್ವನಿಯ ಮೂಲಕ ... ಧ್ವನಿ-ಧ್ವನಿಯಿಂದ, ಆಕಾಶವು ಗೋಚರಿಸುತ್ತದೆ; ಆಕಾಶದಿಂದ, ಗಾಳಿ ಗೋಚರಿಸುತ್ತದೆ; ಗಾಳಿಯಿಂದ, ಬೆಂಕಿ ಹೊಮ್ಮುತ್ತದೆ; ಬೆಂಕಿಯಿಂದ, ನೀರು ವೃದ್ಧಿಯಾಗುತ್ತದೆ; ನೀರಿನಿಂದ, ಭೂಮಿ ವೃದ್ಧಿಯಾಗುತ್ತದೆ.
ಅಲೆನ್ ಗಿನ್ಸ್ಬರ್ಗ್: ಶಬ್ದವು ಸೃಷ್ಟಿಯ ಮೊದಲ ಅಂಶವೇ?
ಪ್ರಭುಪಾದ: ಹೌದು, ಹೌದು.
ಅಲೆನ್ ಗಿನ್ಸ್ಬರ್ಗ್: ಸಾಂಪ್ರದಾಯಿಕವಾಗಿ ಮೊದಲ ಧ್ವನಿ ಯಾವುದು?
ಪ್ರಭುಪಾದ: ವೈದಿಕ ಗ್ರಂಥಗಳು ತಿಳಿಸುತ್ತವೆ 'ಓಂ' ಎಂದು. ಹೌದು. ಆದ್ದರಿಂದ ಕನಿಷ್ಠ ಪಕ್ಷ ನಿಮ್ಮ ಬೈಬಲ್‌ನಿಂದ ನಾವು ಅರ್ಥಮಾಡಿಕೊಳ್ಳಬಹುದು, 'ಸೃಷ್ಟಿಯಾಗಲಿ' ಎಂದು ದೇವರು ಹೇಳಿದ್ದಾನೆ. ಆದ್ದರಿಂದ ಇದು ಧ್ವನಿ, ಮತ್ತು ಅಲ್ಲಿ ಸೃಷ್ಟಿ ಇದೆ. ದೇವರು ಮತ್ತು ಅವನ ಧ್ವನಿಯು ವಿಭಿನ್ನವಲ್ಲ, ಸಂಪೂರ್ಣವಾಗಿದೆ. ನಾನು ಹೇಳುತ್ತೇನೆ 'ಶ್ರೀ. ಗಿನ್ಸ್‌ಬರ್ಗ್," ಈ ಧ್ವನಿ ಮತ್ತು ನಾನು, ಸ್ವಲ್ಪ ವ್ಯತ್ಯಾಸವಿದೆ. ಆದರೆ ದೇವರು ತನ್ನ ಶಕ್ತಿಯಿಂದ ಭಿನ್ನವಾಗಿಲ್ಲ..
690511 - ಸಂಭಾಷಣೆ ಅಲೆನ್ ಗಿನ್ಸ್ಬರ್ಗ್ ಅವರೊಂದಿಗೆ - ಕೊಲಂಬಸ್