"ಈ ಕೃಷ್ಣನ ಧ್ವನಿ ಮತ್ತು ಕೃಷ್ಣ, ವಿಭಿನ್ನವಲ್ಲ. ಆದ್ದರಿಂದ ನಾವು ಕೃಷ್ಣ ಶಬ್ದವನ್ನು ಕಂಪಿಸಿದರೆ, ನಾನು ತಕ್ಷಣವೇ ಕೃಷ್ಣನೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಕೃಷ್ಣನು ಸಂಪೂರ್ಣ ಚೈತನ್ಯನಾದರೆ, ತಕ್ಷಣವೇ ನಾನು ಆಧ್ಯಾತ್ಮಿಕನಾಗುತ್ತೀನಿ. ನೀವು ವಿದ್ದ್ಯುತ್ತನ್ನು ಮುಟ್ಟಿದರೆ ಹೇಗೆ ನೀವು ವಿದ್ಯುದೀಕರಣಗೊಳ್ಳುವಿರೋ ಹಾಗೆ. ಮತ್ತು ನೀವು ಹೆಚ್ಚು ವಿದ್ಯುದೀಕರಣಗೊಂಡಷ್ಟೂ, ಹೆಚ್ಚು ನೀವು ಕೃಷ್ಣೀಕರಣಗೊಳ್ಳುತ್ತೀರಿ. ಕೃಷ್ಣೀಕರಣ. ಆದ್ದರಿಂದ ನೀವು ಸಂಪೂರ್ಣವಾಗಿ ಕೃಷ್ಣಮಯವಾದಾಗ, ನೀವು ಕೃಷ್ಣ ವೇದಿಕೆಯಲ್ಲಿರುವಿರಿ. ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಏತಿ ಕೌಂತೇಯ (ಭ.ಗೀ-೪.೯), ನಂತರ ಸಂಪೂರ್ಣವಾಗಿ ಕೃಷ್ಣೀಕರಣವಾದಾಗ, ಮುಂದೆ ಈ ಭೌತಿಕ ಅಸ್ತಿತ್ವಕ್ಕೆ ಹಿಂತಿರುಗುವುದಿಲ್ಲ. ಅವನು ಕೃಷ್ಣನೊಂದಿಗೆ ಉಳಿಯುತ್ತಾನೆ."
|