"ನಮ್ಮಲ್ಲಿ ಪ್ರತಿಯೊಬ್ಬರೂ ಅಜ್ಞಾನಿಗಳು, ಹುಟ್ಟು ಅಜ್ಞಾನಿಗಳು. ಆದರೆ ಅಧಿಕೃತ ಮಾಹಿತಿಯಿಂದ ದೇವರ ಸಂದೇಶವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಾವು ಪಡೆದುಕೊಂಡಿದ್ದೇವೆ. ಅದು ನಮಗೆ ದೊರಕಿದೆ. ಆದ್ದರಿಂದ ಭಾಗವತವು ಹೇಳುತ್ತದೆ, ಪರಾಭವಸ್ ತಾವದ್ ಅಬೋಧ-ಜಾತಃ (ಶ್ರೀ ಮ ಭಾ ೫.೫.೫): ' ಎಲ್ಲಾ ಜೀವಿಗಳು ಹುಟ್ಟಿನಿಂದ ಅಜ್ಞಾನಿಗಳು. ಅವರು ಸಮಾಜ, ಸಂಸ್ಕೃತಿ, ಶಿಕ್ಷಣ, ನಾಗರಿಕತೆಯ ಪ್ರಗತಿಗಾಗಿ ಏನೇ ಮಾಡಿದರೂ, ಅವನು ತಾನು ಏನೆಂದು ವಿಚಾರಿಸದಿದ್ದರೆ ಅಂತಹ ಎಲ್ಲಾ ಚಟುವಟಿಕೆಗಳು ಪರಾಭವ ಮಾತ್ರವೇ'. ತಾವದ್ ಅಬೋಧ-ಜಾತೋ ಯಾವನ್ ನ ಜಿಜ್ಞಾಸತ ಆತ್ಮ-ತತ್ತ್ವಂ. ಆತ್ಮ-ತತ್ತ್ವಮ್. ಎಷ್ಟು ದಿನ ಒಬ್ಬನು ಹೀಗೆ ವಿಚಾರಿಸುವುದಿಲ್ಲವೋ, 'ನಾನು ಏನು? ದೇವರೆಂದರೆ ಏನು? ಈ ಭೌತಿಕ ಸ್ವಭಾವವು ಯಾವುದು? ಈ ಚಟುವಟಿಕೆಗಳು ಯಾವುವು? ನಮ್ಮ ಸಂಬಂಧಗಳು ಯಾವುವು?'—ಒಂದು ವೇಳೆ ಈ ವಿಚಾರಣೆಗಳು ಇಲ್ಲದಿದ್ದರೆ, ಆಗ ನಮ್ಮ ಎಲ್ಲಾ ಚಟುವಟಿಕೆಗಳು ಸುಮ್ಮನೆ ಸೋಲುತ್ತವೆ. ಪರಾಭವಸ್ ತಾವದ್ ಅಬೋಧ-ಜಾತೋ ಯಾವನ್ ನ ಜಿಜ್ಞಾಸತ ಆತ್ಮ-ತತ್ತ್ವಮ್.ಯಾವನ್ ನ ಪ್ರೀತಿರ್ ಮಯಿ ವಾಸುದೇವೆ: 'ಎಲ್ಲಿಯವರೆಗೂ ಒಬ್ಬ ವ್ಯಕ್ತಿಯು ದೇವರ ಬಗ್ಗೆ ತನ್ನ ಸುಪ್ತ ಪ್ರೀತಿಯನ್ನು ಬೆಳೆಸಿಕೊಳ್ಳುವುದಿಲ್ಲವೊ', ನ ಮುಚ್ಯತೇ ದೇಹ- ಯೋಗೇನಾ ತಾವತ್ (ಶ್ರೀ ಮ ಭಾ ೫.೫.೬), 'ಅಲ್ಲಿಯವರೆಗೆ ಅವರು ಹುಟ್ಟು ಮತ್ತು ಸಾವು ಮತ್ತು ಆತ್ಮದ ವಲಸೆಯ " ಪುನರಾವರ್ತನೆಯಿಂದ ಹೊರಬರಲಾಗುವುದಿಲ್ಲ."
|