KN/690514 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಈ ಕರುಣಾಮಯವಾದ ಆಶೀರ್ವಾದವನ್ನು ಭಗವಾನ್ ಕೃಷ್ಣ ಭಗವಾನ್ ಚೈತನ್ಯ ಮಹಾಪ್ರಭುಗಳು ನೀಡಿದರು, ಅವರು ಕೃಷ್ಣನ ಅವತಾರವಾಗಿದ್ದಾರೆ.
ಕೃಷ್ಣ-ವರ್ಣಂ ತ್ವಿಷಾಕೃಷ್ಣಂ (ಶ್ರೀ ಮ ಭಾ ೧೧.೫.೩೨). ಅವರೇ ಕೃಷ್ಣ. ಖಂಡಿತವಾಗಿಯೂ, ಅವರು ಕೃಷ್ಣ, ಅಥವಾ ಕೃಷ್ಣನನ್ನು ಜಪಿಸುತ್ತಾರೆ. ಆದರೆ ಮೈಬಣ್ಣದಿಂದ ಅವರು ಅಕೃಷ್ಣ. ತ್ವಿಶಾಕೃಷ್ಣಮ್. ಆದ್ದರಿಂದ ಅವರು ನಮಗೆ ಈ ಮಹಾನ್ ಆಶೀರ್ವಾದವನ್ನು ನೀಡಿದರು, ನೀವು ಸುಮ್ಮನೆ ಹರೇ ಕೃಷ್ಣ ಮಂತ್ರವನ್ನು ಜಪಿಸಿರಿ ಮತ್ತು ನೀವು ಎಲ್ಲಾ ಜ್ಞಾನವನ್ನು ಪಡೆಯುವಿರಿ. ಜ್ಞಾನವನ್ನು ಪಡೆಯಲು ಅತಿ ದೊಡ್ಡ ಅಡಚಣೆಯೆಂದರೆ ನಮ್ಮ ಹೃದಯವು ಕೊಳಕು ವಸ್ತುಗಳಿಂದ ಕಟ್ಟಿ ಕೊಂಡಿದೆ. ಮತ್ತು ಭಗವಾನ್ ಚೈತನ್ಯರು ಹೇಳುತ್ತಾರೆ, ನೀವು ಯಾವುದೇ ಅಪರಾಧವಿಲ್ಲದೆ ಬಹಳ ಸೊಗಸಾಗಿ ಜಪಿಸಿದರೆ, ಆಗ ನಿಮ್ಮ ಹೃದಯವು ಎಲ್ಲಾ ಕೊಳಕುಗಳಿಂದ ಶುದ್ಧವಾಗುತ್ತದೆ. ಚೇತೋ-ದರ್ಪಣ-ಮಾರ್ಜನಂ ಭವ-ಮಹಾ -ದಾವಾಗ್ನಿ-ನಿರ್ವಾಪಣಂ (ಚೈ ಚ ಅಂತ್ಯ ೨೦.೧೨). ತದನಂತರ ನೀವು ವಿಮೋಚನೆ ಹೊಂದಿದ್ದೀರಿ. ಬ್ರಹ್ಮ-ಭೂತಃ ಪ್ರಸನ್ನಾತ್ಮ ನ ಷೋಚತಿ (ಭ.ಗೀ- ೧೮.೫೪)." |
690514 - ದೀಕ್ಷೆ ಮತ್ತು ವಿವಾಹ ಉಪನ್ಯಾಸ- ಕೊಲಂಬಸ್ |