"ಆದ್ದರಿಂದ ಇಲ್ಲಿ ಪ್ರತಿಯೊಂದು ಜೀವಿಯು ಅದರ ಮೇಲೆ ಅಧಿಪತಿಯಾಗಲು ಪ್ರಯತ್ನಿಸುತ್ತಿದೆ, ಸ್ಪರ್ಧೆ. ನಾನು ವೈಯಕ್ತಿಕಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇನೆ. ಪ್ರತಿಯೊಬ್ಬರೂ ಅದರ ಮೇಲೆ ಅಧಿಪತಿಯಾಗಲು ಪ್ರಯತ್ನಿಸುತ್ತಿದ್ದಾರೆ. ಅದು ಪ್ರಾಕೃತಿಕ ಅಸ್ತಿತ್ವವಾಗಿದೆ. ಮತ್ತು ಅವನು ತನ್ನ ಅರಿವಿಗೆ ಬಂದಾಗ, ಜ್ಞಾನವಾನ್, " "ನಾನು ಅದರ ಮೇಲೆ ಪ್ರಭುತ್ವ ಸಾಧಿಸಲು ತಪ್ಪಾಗಿ ಪ್ರಯತ್ನಿಸುತ್ತಿದ್ದೇನೆ. ಬದಲಿಗೆ, ನಾನು ಭೌತಿಕ ಶಕ್ತಿಯೊಂದಿಗೆ ಸಿಕ್ಕಿ ಕೊಳ್ಳುತ್ತಿದ್ದೇನೆ," ಎಂದು ಅವನು ಅರಿವಿಗೆ ಬಂದಾಗ, ಅವನು ಶರಣಾಗುತ್ತಾನೆ. ನಂತರ ಮತ್ತೆ ಅವನ ವಿಮೋಚನೆಯ ಜೀವನವು ಪ್ರಾರಂಭವಾಗುತ್ತದೆ. ಅದು ಆಧ್ಯಾತ್ಮಿಕ ಜೀವನದ ಸಂಪೂರ್ಣ ಪ್ರಕ್ರಿಯೆಯಾಗಿದೆ. ಆದ್ದರಿಂದ ಕೃಷ್ಣನು ಹೇಳುತ್ತಾನೆ, ಸರ್ವ ಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ (ಭ.ಗೀ- ೧೮.೬೬). ಅದರ ಮೇಲೆ ಅಧಿಪತಿಯಾಗಲು ಸುಳ್ಳಾಗಿ ಪ್ರಯತ್ನಿಸಿ ಮಾರ್ಗೋಪಾಯಗಳನ್ನು ತಯಾರಿಸಬೇಡಿ. ಅದು... ನೀವು ಸಂತೋಷವಾಗಿರುವುದಿಲ್ಲ, ಏಕೆಂದರೆ ನೀವು ಲೌಕಿಕ ಸ್ವರೂಪದ ಮೇಲೆ ಅಧಿಪತಿಯಾಗಲು ಸಾಧ್ಯವಿಲ್ಲ. ಇದು ಅಸಾಧ್ಯ."
|