KN/690521 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವೈದಿಕ ಸಾಹಿತ್ಯವು ಲಬ್ಧ್ವಾ ಸುದುರ್ಲಭಮ್ ಇದಮ್ (ಶ್ರೀ ಮ ಭಾ ೧೧.೯.೨೯). ಎಂದು ತಿಳಿಸುತ್ತದೆ. ಇದಮ್ ಎಂದರೆ 'ಇದು'. 'ಇದು' ಎಂದರೆ ಈ ದೇಹ, ಈ ಅವಕಾಶ, ಮಾನವ ರೂಪದ ಜೀವನ, ಅಭಿವೃದ್ಧಿ ಹೊಂದಿದ ಪ್ರಜ್ಞೆ, ಸಂಪೂರ್ಣ ಸೌಲಭ್ಯ. ಪ್ರಾಣಿಗಳು ಅವುಗಳಿಗೆ ಯಾವುದೇ ಸೌಲಭ್ಯವಿಲ್ಲ. ಅವು ಕಾಡಿನಲ್ಲಿ ವಾಸಿಸುತ್ತಿವೆ, ಆದರೆ ನಾವು ಈ ಕಾಡುಗಳನ್ನು, ಈ ವನಗಳನ್ನು, ಹಲವಾರು ಸುಖದಾಯಕ ಪರಿಸ್ಥಿತಿಗಳಿಗೆ ಬಳಸಿಕೊಳ್ಳಬಹುದು. ಆದ್ದರಿಂದ ನಾವು ಅಭಿವೃದ್ಧಿ ಹೊಂದಿದ ಪ್ರಜ್ಞೆ, ಬುದ್ಧಿವಂತಿಕೆಯನ್ನು ಪಡೆದುಕೊಂಡಿದ್ದೇವೆ. ನಾವು ಬಳಸಿಕೊಳ್ಳಬಹುದು. ಆದ್ದರಿಂದ ಅದನ್ನು ಅರ್ಥದಂ ಎನ್ನುತ್ತಾರೆ. ಅರ್ಥ. ಅರ್ಥ ಎಂಬುದಕ್ಕೆ ಎರಡು ಅರ್ಥಗಳಿವೆ. ಅರ್ಥ-ಶಾಸ್ತ್ರ. ಅರ್ಥ-ಶಾಸ್ತ್ರ ಎಂದರೆ ಎಕನಾಮಿಕ್ಸ್, ಸಂಪತ್ತನ್ನು ಹೆಚ್ಚಿಸುವುದು ಹೇಗೆ. ಅದನ್ನು ಅರ್ಥ ಎನ್ನುತ್ತಾರೆ. ಹಾಗಾಗಿ ಅರ್ಥದಮ್. ಈ ಮಾನವನ ಜೀವನವು ನಿಮಗೆ ಅರ್ಥವನ್ನು ನೀಡಬಲ್ಲದು. ಅರ್ಥ ಎಂದರೆ ಏನೋ ಗಣನೀಯ."
690521 - ಉಪನ್ಯಾಸ ದೀಕ್ಷೆ - ನ್ಯೂ ವೃಂದಾಬನ್, ಯು ಯಸ್ ಏ