"ಮತ್ತಃ ಸ್ಮೃತಿರ್ ಜ್ಞಾನಮ್ ಅಪೋಹನಂ ಚ (ಭ.ಗೀ- ೧೫.೧೫ ). ಒಬ್ಬರು ಮರೆತುಬಿಡುತ್ತಾರೆ ಮತ್ತು ಒಬ್ಬರು ನೆನಪಿಸಿಕೊಳ್ಳುತ್ತಾರೆ ಕೂಡ. ಸ್ಮರಣೇ ಮತ್ತು ಮರೆವು. ಹಾಗಾದರೆ ಏಕೆ ಒಬ್ಬನು ಕೃಷ್ಣ ಪ್ರಜ್ಞೆಯನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಏಕೆ ಒಬ್ಬನು ಕೃಷ್ಣ ಪ್ರಜ್ಞೆಯನ್ನು ಮರೆಯುತ್ತಾನೆ? ವಾಸ್ತವಿಕವಾಗಿ, ನನ್ನ ಸಹಜ ಸ್ವರೂಪವು, ಚೈತನ್ಯ ಮಹಾಪ್ರಭು ಹೇಳುವಂತೆ, ಜೀವೇರಾ ಸ್ವರೂಪ ಹಯ ನಿತ್ಯ-ಕೃಷ್ಣ-ದಾಸ (ಚೈ ಚ ಮಧ್ಯ ೨೦.೧೦೮-೧೦೯). ವಾಸ್ತವಿಕವಾಗಿ ಜೀವಿಗಳ ಸಹಜ ಸ್ವರೂಪವೆಂದರೆ ಅವನು ಶಾಶ್ವತವಾಗಿ ದೇವರ ಸೇವಕ. ಅದು ಅವನ ಸ್ಥಾನ. ಅವನು ಅದಕ್ಕಾಗಿ ಉದ್ದೇಶಿಸಿದ್ದಾನೆ, ಆದರೆ ಅವನು ಮರೆತುಬಿಡುತ್ತಾನೆ. ಆದ್ದರಿಂದ ಆ ಮರೆವು ಕೂಡ ಜನ್ಮಾದಿ ಅಸ್ಯ ಯತಃ (ಶ್ರೀ ಮ ಭಾ ೧.೧.೧),ಪರಮಾತ್ಮ. ಏಕೆ? ಏಕೆಂದರೆ ಅವನು ಮರೆಯಲು ಇಚ್ಛಿಸಿದ."
|