KN/690525 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಬ್ರಾಹ್ಮಣನ ಅರ್ಹತೆಯು ಸತ್ಯತೆ, ಶುಚಿತ್ವ, ಸತ್ಯಂ ಶೌಚಮ್ ಆಗಿದೆ. ಸಮ, ಮನಸ್ಸಿನ ಸಮತೋಲನ, ಯಾವುದೇ ಅಡಚಣೆಯಿಲ್ಲದೆ, ಯಾವುದೇ ಆತಂಕವಿಲ್ಲದೆ. ಸತ್ಯಂ ಶೌಚಮ್ ಶಮೋ ದಮ. ದಮ ಎಂದರೆ ಇಂದ್ರಿಯಗಳನ್ನು ನಿಯಂತ್ರಿಸುವುದು. ಶಮೋ ದಮ ತಿತಿಕ್ಷಾ. ತಿತಿಕ್ಷಾ ಎಂದರೆ ಸಹನೆ. ಭೌತಿಕ ಜಗತ್ತಿನಲ್ಲಿ ಅನೇಕ ವಿಷಯಗಳು ಸಂಭವಿಸುತ್ತವೆ. ನಾವು ಸಹಿಸಿಕೊಳ್ಳಲು ಅಭ್ಯಾಸ ಮಾಡಬೇಕು. ತಾಂಸ್ ತಿತಿಕ್ಷಸ್ವ ಭಾರತ. ಕೃಷ್ಣ ಹೇಳುತ್ತಾನೆ, "ನೀವು ಸಹಿಷ್ಣುತೆಯನ್ನು ಕಲಿಯಬೇಕು. ಸುಖ-ದುಃಖ, ಸಂತೋಷ, ಸಂಕಟ, ಋತು ಕಾಲಗಳ ಬದಲಾವಣೆಗಳಂತೆ ಬರುತ್ತವೆ." ಕೆಲವೊಮ್ಮೆ ಮಳೆ ಬೀಳುವಂತೆ, ಕೆಲವೊಮ್ಮೆ ಹಿಮಪಾತ, ಕೆಲವೊಮ್ಮೆ ಸುಡುತ್ತಿರುವ ಶಾಖವಿದೆ. ನೀವು ಹೇಗೆ ಹೋರಾಡುತ್ತೀರಿ? ಅದು ಸಾಧ್ಯವಿಲ್ಲ. ಸಹಿಸಿಕೊಳ್ಳಲು ಪ್ರಯತ್ನಿಸಿ. ಅಷ್ಟೆ. "
690525 - ಉಪನ್ಯಾಸ ಬ್ರಾಹ್ಮಣ ದೀಕ್ಷಾ - ನವ ವೃಂದಾವನ, ಯು ಯಸ್ ಏ