"ಕೇವಲ ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಮೂಲಕ, ಜನ್ಮ ಕರ್ಮ ಮೇ ದಿವ್ಯಂ ಯೋ ಜಾನಾತಿ ತತ್ತ್ವತಃ ತ್ಯಕ್ತ್ವಾ ದೇಹಮ್ (ಭ.ಗೀ- ೪.೯), ಆ ವ್ಯಕ್ತಿ, ಈ ದೇಹವನ್ನು ತೊರೆದ ನಂತರ, ಮಾಮ್ ಯೇತಿ ಅವನು ಕೃಷ್ಣನಲ್ಲಿಗೆ ಹೋಗುತ್ತಾನೆ. ಮತ್ತು ಒಬ್ಬನು ಆಧ್ಯಾತ್ಮಿಕ ದೇಹವನ್ನು ಪಡೆಯದ ಹೊರತು ಕೃಷ್ಣನಲ್ಲಿ ಯಾರು ಹೋಗಬಲ್ಲರು ಅದೇ ಸಚ್-ಚಿದ್-ಆನಂದ-ವಿಗ್ರಹಃ (ಬ್ರ. ಸಂ ೫.೧)? ಒಬ್ಬ ಅದೇ ವಿಗ್ರಹವನ್ನು ಹೊಂದಿರದಿದ್ದಲ್ಲಿ... ಅದನ್ನು ಅರ್ಥಮಾಡಿಕೊಳ್ಳಬಹುದು, ಹೇಗೆ ನಾವು ಒಂದು ನಿರ್ದಿಷ್ಟ ಸ್ಥಳದಲ್ಲಿ ಹುಟ್ಟಿದಾಗ, ಗ್ರೀನ್‌ಲ್ಯಾಂಡ್‌ನಲ್ಲಿ ಎಂದು ಭಾವಿಸೋಣ, ಯಾವುದು ಯಾವಾಗಲೂ ಮಂಜುಗಡ್ಡೆಯಿಂದ ತುಂಬಿರುತ್ತದೆ, ಅಥವಾ ಬೇರೆ ಯಾವುದಾದರೂ ಸ್ಥಳದಲ್ಲಿ, ಆದ್ದರಿಂದ ನೀವು ನಿರ್ದಿಷ್ಟ ರೀತಿಯ ದೇಹವನ್ನು ಪಡೆದಿದ್ದೀರಿ. ಅಲ್ಲಿ ಪ್ರಾಣಿಗಳು, ಅಲ್ಲಿ ಮನುಷ್ಯರು, ಅವರು ನಿರ್ದಿಷ್ಟ ರೀತಿಯ ದೇಹವನ್ನು ಹೊಂದಿದ್ದಾರೆ. ಅವರು ತೀವ್ರ ಶೀತವನ್ನು ಸಹಿಸಿಕೊಳ್ಳಬಲ್ಲರು. ನಮಗೆ ಸಾಧ್ಯವಿಲ್ಲ. ಹಾಗೆಯೇ, ನೀವು ಕೃಷ್ಣಾಲೋಕಕ್ಕೆ ಹೋದಾಗ ನೀವು ಒಂದು ನಿರ್ದಿಷ್ಟ ರೀತಿಯ ದೇಹವನ್ನು ಹೊಂದುವಿರಿ. ಆ ನಿರ್ದಿಷ್ಟ ರೀತಿಯ ದೇಹ ಯಾವುದು? ಸಚ್-ಚಿದ್-ಆನಂದ-ವಿಗ್ರಹಃ (ಬ್ರ. ಸಂ ೫.೧). ನೀವು ಯಾವುದೇ ಗ್ರಹಕ್ಕೆ ಹೋಗಿ, ನೀವು ನಿರ್ದಿಷ್ಟ ದೇಹವನ್ನು ಹೊಂದಿರಬೇಕು.ಆದ್ದರಿಂದ ತ್ಯಕ್ತ್ವಾ ದೇಹಮ್ ಪುನರ್ ಜನ್ಮ ನೈತಿ (ಭ.ಗೀ- ೪.೯). ಮತ್ತು ನೀವು ಶಾಶ್ವತವಾದ ದೇಹವನ್ನು ಪಡೆದ ತಕ್ಷಣ, ನೀವು ಮತ್ತೆ ಈ ಭೌತಿಕ ಪ್ರಪಂಚಕ್ಕೆ ಹಿಂತಿರುಗಬೇಕಾಗಿಲ್ಲ."
|