"ಆದ್ದರಿಂದ ಈ ಆಂದೋಲನವು , ಕೃಷ್ಣ ಪ್ರಜ್ಞೆಯ ಆಂದೋಲನವು, ನಾನು ಹೇಳುವುದೇನೆಂದರೆ, ಎಲ್ಲವನ್ನೂ ಸುಗಮಗೊಳಿಸುತ್ತದೆ, ಎಲ್ಲಕ್ಕೂ ದಾರಿಯಾಗುತ್ತದೆ. ಆದ್ದರಿಂದ ಅವರು ತಿಳಿದಿರಬೇಕು. ಮತ್ತು ನಮ್ಮ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ನಾವು ಈ ಪ್ರಕ್ರಿಯೆಯನ್ನು ಕಾರ್ಖಾನೆಗಳಲ್ಲಿ, ಎಲ್ಲಿಯಾದರೂ ಸಹ ಪ್ರಾರಂಭಿಸಬಹುದು ಮತ್ತು ನಾವು ಎಲ್ಲವನ್ನು ಶಾಂತಿಯುತವಾಗಿ ಮಾಡುತ್ತೇವೆ. ಅದು ಸತ್ಯ. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಕಾರ್ಖಾನೆ, ಎಲ್ಲೆಡೆಯಲ್ಲೂ. ಚೇತೋ- ದರ್ಪಣ -ಮಾರ್ಜನಂ (ಶ್ರೀ ಚೈ.ಚ. ಅಂತ್ಯ ೨೦.೧೨, ಶಿಕ್ಷಾಷ್ಠಕ ೧). ಇದು ಶುದ್ಧೀಕರಣ ಪ್ರಕ್ರಿಯೆ. ಎಲ್ಲವೂ ಕೊಳಕು. ಆದ್ದರಿಂದ ನಾವು ಶುದ್ಧೀಕರಿಸಲು ಮತ್ತು ಜನರನ್ನು ಸಂತೃಪ್ತಿ ಮತ್ತು ಶಾಂತಿಯುತವಾಗಿ ಮಾಡಲು ಬಯಸುತ್ತೇವೆ. ಅದು ನಮ್ಮ ಧ್ಯೇಯವಾಗಿದೆ. ನಾವು ಹಣ ಸಂಗ್ರಹಿಸುವ ಧ್ಯೇಯವಲ್ಲ, "ನಿಮ್ಮ ಹಣವನ್ನು ನನಗೆ ನೀಡಿ ಮತ್ತು ನಾನು ಆನಂದಿಸಲು ಬಿಡಿ." ನಾವು ಹಾಗಲ್ಲ. ಹಣ ..., ನಮಗೆ ಬಹಳಷ್ಟು ಹಣವಿದೆ. ಕೃಷ್ಣ ನಮ್ಮ...... ಸಂಪೂರ್ಣ ಹಣವು ಕೃಷ್ಣನದು. ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೆ ನಾಧಿಕಂ ತತಃ (ಭ.ಗೀ- ೬.೨೨).ಕೃಷ್ಣನು ಎಷ್ಟು ಅಮೂಲ್ಯನೆಂದರೆ, ಒಬ್ಬನು ಕೃಷ್ಣನನ್ನು ಪಡೆದಲ್ಲಿ, ಅವನು ಇನ್ನು ಮುಂದೆ ಏನನ್ನೂ ಬಯಸುವುದಿಲ್ಲ."
|