ಹೇಗೆ ಮೃತ್ಯುದೇಹವನ್ನು ಅಲಂಕರಿಸುತ್ತಾರೋ, ಆ ಮೃತ್ಯುದೇಹದ ಪುತ್ರರು ದೇಹವನ್ನು ನೋಡಿ, "ಓ, ನನ್ನ ತಂದೆಯವರು ನಗುತ್ತಿದ್ದಾರೆ". (ನಗುತ್ತ) ಆದರೆ ತನ್ನ ತಂದೆ ಆಗಲೇ ಎಲ್ಲಿಗೆ ಹೋಗಿದ್ದಾನೆ ಎಂದು ಅವನಿಗೆ ಗೊತ್ತಿಲ್ಲ. ನೀವು ನೋಡಿದಿರಾ? ಆದ್ದರಿಂದ ಈ ಐಹಿಕ ನಾಗರೀಕತೆಯು ಸತ್ತ ದೇಹಕ್ಕೆ ಅಲಂಕಾರ ಮಾಡಿದಂತೆ ಇದೆ. ಈ ದೇಹ ಸತ್ತಿದೆ. ಅದು ಸತ್ಯ. ಎಲ್ಲಿಯವರೆಗೆ ಆತ್ಮವು ಇರುತ್ತದೆಯೋ, ದೇಹವು ಕೆಲಸ ಮಾಡುತ್ತದೆ, ಅದು ಚಲಿಸುತ್ತದೆ. ನೀವು ತೊಡುವ ಮೇಲಂಗಿಯ ತರ, ಅದು ಸತ್ತಿದೆ. ಆದರೆ ಅದನ್ನು ನೀವು ಧರಿಸಿರುವವರೆಗೂ, ಅದು ಚಲಿಸಿದಂತೆ ಕಾಣುತ್ತದೆ, ಅದು ಚಲಿಸುತ್ತದೆ. ಆದರೆ ಯಾರಾದರೂ ಬೆರಗಾಗಿ, "ಓ, ಮೇಲಂಗಿಯು ಎಷ್ಟು ಚೆನ್ನಾಗಿ ಚಲಿಸುತ್ತಿದೆ!" (ನಗು) ಅವನಿಗೆ ಗೊತ್ತಿಲ್ಲ ಮೇಲಂಗಿಯು ಚಲಿಸಲಾರದು, ಮೇಲಂಗಿಯು ನಿರ್ಜೀವ. ಆದರೆ ಮನುಷ್ಯನು ಅದನ್ನು ತೊಡುವುದರಿಂದ ಅದು ಚಲಿಸುತ್ತದೆ, ಪ್ಯಾಂಟ್ ಚಲಿಸುತ್ತದೆ, ಚಪ್ಪಲಿ ಚಲಿಸುತ್ತದೆ, ಟೋಪಿಯು ಚಲಿಸುತ್ತದೆ. ಅದೇ ರೀತಿ ಈ ದೇಹ ನಿರ್ಜೀವ, ಅದಕ್ಕೆ ಸಮಯವಿದೆ: ಈ ದೇಹವು ಒಂದಿಷ್ಟು ಕಾಲದವರೆಗೂ ಇರುತ್ತದೆ. ಅದು ಜೀವನದ ಆಯಸ್ಸು. ಆದರೆ ಜನರಿಗೆ ಈ ನಿರ್ಜೀವ ದೇಹದ ಮೇಲೆ ಆಸಕ್ತಿ.
|