ವೈದ್ಯರು "ಇದನ್ನು ಮಾಡಬೇಡಿ" ಎಂದು ಹೇಳಿದ ಹಾಗೆ ಒಬ್ಬ ಭಕ್ತನಿಗೆ ಒತ್ತಾಯ ಮಾಡಬೇಕಾಗಿಲ್ಲ, ಅವನು ತಾನಾಗಿಯೇ ಮಾಡುತ್ತಾನೆ. ಏಕೆ? ಪರಂ ದೃಷ್ಟ್ವಾ ನಿವರ್ತತೇ: ಅವನು ನೋಡಿದ್ದಾನೆ ಅಥವಾ ಇನ್ನು ಉತ್ತಮವಾಗಿರುವುದನ್ನು ರುಚಿಸಿದ್ದಾನೆ, ಆದ್ಧರಿಂದ ಅವನು ಈ ಅಸಹ್ಯಕರವಾದ ರುಚಿಯನ್ನು ಇನ್ನು ಹೆಚ್ಚಾಗಿ ಅನುಭವಿಸಲು ಬಯಸುವುದಿಲ್ಲ. ಅದು ಭಕ್ತಿ ಪರೇಶಾನು... ಅದರ ಅರ್ಥ ನಾವು ಈ ಅಸಹ್ಯಕರವಾದ ವಸ್ತುಗಳ ಮೇಲೆ ಅರುಚಿಯನ್ನು ಹೊಂದಿದರೆ, ನಾವು ಕೃಷ್ಣ ಪ್ರಜ್ಞೆಯಲ್ಲಿ ಮುಂದುವರೆಯುತ್ತಿದ್ದೇವೆ ಎಂದು ತಿಳಿದುಕೊಳ್ಳಬೇಕು. ನಿಮ್ಮ ಕೈಯಲ್ಲೇ ಪರೀಕ್ಷೆ ಇದೆ. ನೀವು ಯಾರನ್ನು ಕೇಳಬೇಕಾಗಿಲ್ಲ, "ನಾನು ಕೃಷ್ಣ ಪ್ರಜ್ಞೆಯಲ್ಲಿ ಮುಂದುವರೆಯುತ್ತಿದ್ದೆನಾ?" ಆದರೆ ನೀವು ಅರ್ಥ ಮಾಡಿಕೊಳ್ಳಬಹುದು. ನಿಖರವಾಗಿ ಈ ರೀತಿಯಲ್ಲೇ: ನಿಮಗೆ ಹಸಿವಾಗಿದ್ದರೆ, ನೀವು ತಿನ್ನುತ್ತಿದ್ದರೆ, ನಿಮಗೆ ಗೊತ್ತಾಗುತ್ತದೆ, ತಿನ್ನುವುದರಿಂದ ನಿಮ್ಮ ಹಸಿವು ಎಷ್ಟು ತೃಪ್ತಿಯಾಗಿದೆ, ನೀವು ಎಷ್ಟು ಶಕ್ತಿಯನ್ನು ಪಡೆಯುತ್ತಿದ್ದೀರಿ, ಎಷ್ಟು ಆನಂದವನ್ನು ಅನುಭವಿಸುತ್ತಿದ್ದೀರಿ ಎಂದು. ನೀವು ಯಾರನ್ನು ಕೇಳಬೇಕಾಗಿಲ್ಲ. ಅದೇ ರೀತಿ, ಯಾರಾದರೂ ತನ್ನ ಕೃಷ್ಣ ಪ್ರಜ್ಞೆಯನ್ನು ಹೆಚ್ಚಿಸಿದರೆ, ಅವನು ಎಲ್ಲ ಭೌತಿಕ ಸುಖಗಳ ಮೇಲೆ ನಿರಾಸಕ್ತಿಯನ್ನು ಹೊಂದುತ್ತಾನೆ, ಇದೇ ಪರೀಕ್ಷೆ.
|