KN/690618 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶುಕದೇವ ಗೋಸ್ವಾಮಿಯವರು ಕೇವಲ ಕೀರ್ತನೆಯಿಂದ ಮೋಕ್ಷ ಮತ್ತು ಪರಿಪೂರ್ಣತೆಯನ್ನು ಪಡೆದರು. ಇಲ್ಲಿ ಕೀರ್ತನೆ ಎಂದರೆ ಶ್ರೀಮದ್-ಭಾಗವತಮ್‌ನಿಂದ ಭಗವಂತನ ವೈಭವಗಳನ್ನು ವಿವರಿಸುವುದು. ಆದ್ದರಿಂದ ಅವರು ಹೇಳುತ್ತಾರೆ, ಪ್ರವರ್ತಮಾನಸ್ಯ ಗುಣೈರ್ ಅನಾತ್ಮನಸ್ ತತೋ ಭಾವನ್ ದರ್ಶಯ ಚೇಷ್ಟಿತಂ: 'ಜನರು ಪ್ರಕೃತಿಯ ಗುಣಗಳಿಂದ ಆಳವಾಗಿ ಬಂಧಿತರಾಗಿದ್ದಾರೆ. ಹಾಗಾಗಿ ಅವರನ್ನು ಈ ಬಂಧನದಿಂದ ಮುಕ್ತಗೊಳಿಸಲು, ನೀವು ಮಾರ್ಗವನ್ನು ತೋರಿಸಿರಿ, ಅವರು ಸುಮ್ಮನೆ ಕೇಳಲಿ, ಭಗವಂತನ ಅದ್ಭುತ ಚಟುವಟಿಕೆಗಳನ್ನು ಅವರು ಶ್ರವಣ ಮಾಡಲಿ', ಏಕೆಂದರೆ ಪರಿಪೂರ್ಣ... ಕೃಷ್ಣನು ಪರಿಪೂರ್ಣ ಸತ್ಯ. ಆದ್ದರಿಂದ ಕೃಷ್ಣ ಮತ್ತು ಕೃಷ್ಣನ ಚಟುವಟಿಕೆಗಳು ಒಂದೇ ಆಗಿವೆ ಏಕೆಂದರೆ ಅದು ಪರಿಪೂರ್ಣ. ಇದು ದ್ವಂದ್ವವಲ್ಲ. ಭೌತಿಕ ಜಗತ್ತಿನಲ್ಲಿ, ನಾನು ಮತ್ತು ನನ್ನ ಚಟುವಟಿಕೆಗಳು ವಿಭಿನ್ನವಾಗಿವೆ. ಆದರೆ ಈ ಜಗತ್ತು ದ್ವಂದ್ವ ಜಗತ್ತು. ಆದರೆ ಪರಿಪೂರ್ಣ ಆಧ್ಯಾತ್ಮಿಕ ಜಗತ್ತಿನಲ್ಲಿ, ಕೃಷ್ಣ ಮತ್ತು ಕೃಷ್ಣನ ಕಥೆಗಳು, ಕೃಷ್ಣ ಮತ್ತು ಕೃಷ್ಣನ ಹೆಸರು, ಕೃಷ್ಣ ಮತ್ತು ಕೃಷ್ಣನ ಗುಣಗಳು, ಕೃಷ್ಣ ಮತ್ತು ಕೃಷ್ಣನ ಕೀರ್ತಿ, ಇವೆಲ್ಲವೂ ಕೃಷ್ಣ. ಕೃಷ್ಣ ಮತ್ತು ಕೃಷ್ಣನ ಬಂಧುಗಳು, ಇವರೆಲ್ಲರೂ ಕೃಷ್ಣ. ಕೃಷ್ಣನು ಗೋಪಾಲ ಬಾಲಕ. ಹಾಗಾಗಿ ಕೃಷ್ಣ ಮತ್ತು ಗೋವುಗಳು, ಇವರೆಲ್ಲರೂ ಕೃಷ್ಣ. ಇದನ್ನು ನಾವು ಕಲಿಯಬೇಕು. ಅವರು ಕೃಷ್ಣನಿಗಿಂತ ಭಿನ್ನರಲ್ಲ. ಕೃಷ್ಣ ಮತ್ತು ಗೋಪಿಯರು, ಅವರೆಲ್ಲರೂ ಕೃಷ್ಣ. ಆನಂದ-ಚಿನ್ಮಯ-ರಸ-ಪ್ರತಿಭಾವಿತಭಿಃ (ಭ್ರ.ಸಂ 5.37). ಅದನ್ನು ನಾವು ಅರ್ಥಮಾಡಿಕೊಳ್ಳಬೇಕು.”
690618 - ಉಪನ್ಯಾಸ SB 01.05.14 - New Vrindaban, USA