KN/690619 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಚಟುವಟಿಕೆ, ಕೃಷ್ಣ ಪ್ರಜ್ಞೆಯ ಕಾರ್ಯ ಕೇವಲ ಧಾರ್ಮಿಕವಲ್ಲ; ಇದು ದಿವ್ಯವಾಗಿದೆ ಆದ್ದರಿಂದ ನೀವು ಕೃಷ್ಣ ಪ್ರಜ್ಞೆಯ ಈ ವೇದಿಕೆಯಲ್ಲಿ ಉಳಿದುಕೊಂಡರೆ, ಸುಲಭ ಪ್ರಕ್ರಿಯೆ, ನಾವು ನವ ವೃಂದಾವನದಲ್ಲಿ ನಿರ್ವಹಿಸುತ್ತಿರುವಂತೆಯೇ, ಪಠಣ, ನೃತ್ಯ, ಭಾಗವತ-ಪ್ರಸಾದವನ್ನು ತಿನ್ನುವುದು, ಭಾಗವತ ಅಥವಾ ಭಗವದ್ಗೀತೆಯನ್ನು ಕೇಳುವುದು, ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ಸರಳ ಪ್ರಕ್ರಿಯೆ ... ಇದು ತುಂಬಾ ಕಷ್ಟವಲ್ಲ. ಮತ್ತು ನೀವು ಲಘು ಪ್ರಸಾದದಿಂದ ತೃಪ್ತರಾಗುತ್ತೀರಿ, ಅದು ಏನಿದ್ದರೂ ಪರವಾಗಿಲ್ಲ. ಈ ಪ್ರಕ್ರಿಯೆಯು ನಿಮ್ಮನ್ನು ದೃಢವಾಗಿ ಉಳಿಯುವಂತೆ ಮಾಡುತ್ತದೆ. ಆದ್ದರಿಂದ ಅಡ್ಡ ದಾರಿ ಹಿಡಿಯಬೇಡಿ. ಏನಾದರೂ ಚಿಕ್ಕ ಚಿಕ್ಕ ಕಟ್ಟುಪಾಡುಗಳಿದ್ದರೂ ಕಷ್ಟವೇನಿಲ್ಲ. ಈ ತತ್ವಕ್ಕೆ ಬದ್ಧರಾಗಿ, ಹರೇಕೃಷ್ಣ ಜಪ ಮಾಡಿ, ಪ್ರಸಾದ ಸೇವಿಸಿ, ನಿಮ್ಮ ಜೀವನ ಸಾರ್ಥಕವಾಗುತ್ತದೆ'. ಅವನು ಕೆಳಗೆ ಬಿದ್ದರೂ ಸಹ ನಷ್ಟವಿಲ್ಲ ಎಂದು ನಾರದ ಮುನಿಯ ಆಶ್ವಾಸನೆ ಇಲ್ಲಿದೆ. ಆದರೆ, ಇನ್ನೊಂದು ಕಡೆ, ಯಾರು ಕೃಷ್ಣ ಪ್ರಜ್ಞೆಯಲ್ಲಿಲ್ಲವೊ, ಅವನು ತುಂಬಾ ಸಕ್ರಮ ಉದ್ಯಮಿ ಅಥವಾ ಸಕ್ರಮ ಕೆಲಸಗಾರನಾಗಿದ್ದರೆ, ಇನ್ನೂ ಏನೇನೊ ಅನೇಕ ವಿಷಯಗಳು, ಆದರೂ ಅವನಿಗೆ ಯಾವ ಲಾಭವೂ ಇಲ್ಲ.
690619 - ಉಪನ್ಯಾಸ ಶ್ರೀ ಮ ಭಾ ೦೧.೦೫.೧೫-೧೭- ನವ ವೃಂದಾವನ, ಯು ಯಸ್ ಏ