"ಆದ್ದರಿಂದ ನಾವು ಈ ಕೃಷ್ಣ ಪ್ರಜ್ಞೆಯನ್ನು ಅಭ್ಯಾಸಿಸುತ್ತಿದ್ದೇವೆ ಎಂದು ಭಾವಿಸೋಣ. ಈಗ ಸಾವು ತಕ್ಷಣವೇ ಬರಬಹುದು. ನಾವೆಲ್ಲರೂ ಸಾಯುತ್ತೇವೆ. ಆದ್ದರಿಂದ ನಾರದ ಮುನಿಯು ಪುನರ್ ಏವ ತತೋ ಸ್ವೇದ್ವಾ(?) ಎಂದು ನಮಗೆ ಪ್ರೋತ್ಸಾಹವನ್ನು ನೀಡುತ್ತಾರೆ: "ನಾವು ಸಾಯಬಹುದು ಅಥವಾ ಕೆಲವೊಮ್ಮೆ ನಾವು ಪತನ ಹೊಂದಬಹುದು ..... ಏಕೆಂದರೆ ಮಾಯೆ ಮತ್ತು ಕೃಷ್ಣ, ಅಕ್ಕಪಕ್ಕದಲ್ಲಿದ್ದಾರೆ. "ಆದರೂ ಪರವಾಗಿಲ್ಲ. ನಾವು ಕೃಷ್ಣ ಪ್ರಜ್ಞೆಯಲ್ಲಿದ್ದೇವೆ. ಆದರೆ ನಾವು ಪತನ ಹೊಂದಿದರೆ...," ವೃಸೇ ವಾ ತದಾ ಸ್ವ-ಧರ್ಮ ತ್ಯಾಗ ನಿಮಿತ್ತ ನಾರ್ಥಾಶ್ರಯ (?), "ನಂತರ ನೀವು ನಿಮ್ಮ ಎಲ್ಲಾ ಇತರ ಕರ್ತವ್ಯಗಳನ್ನು ತ್ಯಜಿಸಿದ್ದೀರಿ. ಆದುದರಿಂದ ನಿಮ್ಮ ಕರ್ತವ್ಯವನ್ನು ಕೈಬಿಟ್ಟಿದ್ದಕ್ಕೆ ಏನಾದರೂ ಶಿಕ್ಷೆಯಾಗಬೇಕು." ನಾನು ಹೇಳುವುದರ ಅರ್ಥ ಈ ಲೌಕಿಕ ಶಿಕ್ಷೆಯಲ್ಲ. ಹೇಗೆ, ವೈದಿಕ ಪದ್ಧತಿಯ ಪ್ರಕಾರ ಬ್ರಾಹ್ಮಣರು, ಕ್ಷತ್ರಿಯರು ಇರುತ್ತಾರೆ; ಉದಾಹರಣೆಗೆ, ಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಿದ್ದ ಹಾಗೆ, "ನೀನು ಕ್ಷತ್ರಿಯ, ಆದ್ದರಿಂದ ನೀನು ಈ ಹೋರಾಟದಲ್ಲಿ ಸತ್ತರೆ, ನಿನ್ನ ಸ್ವರ್ಗದ ಬಾಗಿಲು ತೆರೆದಿರುತ್ತದೆ." ಏಕೆಂದರೆ, ಶಾಸ್ತ್ರದ ಪ್ರಕಾರ, ಒಬ್ಬ ಕ್ಷತ್ರಿಯನು ಯುದ್ಧ ಮಾಡುವಾಗ ಸತ್ತರೆ, ಅವನು ಯಾವ ಪ್ರಯತ್ನವಿಲ್ಲದೆಯೇ ಸ್ವರ್ಗೀಯ ಗ್ರಹಕ್ಕೆ ಉನ್ನತಿಯನ್ನು ಪಡೆಯುತ್ತಾನೆ. ಮತ್ತು ಅವನು ಹೊರಟು ಹೋದರೆ, ಯುದ್ಧವನ್ನು ತೊರೆದು, ಆಗ ಅವನು ನರಕಕ್ಕೆ ಹೋಗುತ್ತಾನೆ. ಅದೇ ರೀತಿಯಲ್ಲಿ, ಒಬ್ಬನು ತನ್ನ ಕರ್ತವ್ಯಗಳನ್ನು, ನಿಗದಿತ ಕರ್ತವ್ಯಗಳನ್ನು ನಿರ್ವಹಿಸದಿದ್ದರೆ, ಅವನು ಪತನ ಹೊಂದುತ್ತಾನೆ.
|