KN/690622 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಶ್ರೀಮದ್-ಭಾಗವತದ ಹೇಳಿಕೆಯು ತಲ್ ಲಭ್ಯತೇ ದುಃಖವದ್ ಅನ್ಯತಃ ಸುಖಮ್ (ಶ್ರೀ ಮ ಭಾ ೦೧.೦೫.೧೮ ).ನೀವು ಆರ್ಥಿಕ ಬೆಳವಣಿಗೆ ಎಂದು ಕರೆಯಲ್ಪಡುವ ಅಭಿವೃದ್ಧಿಗಾಗಿ ಪ್ರಯತ್ನಿಸಬೇಡಿ. ನಿಮ್ಮ ಭಾಗ್ಯದಲ್ಲಿರುವುದಕ್ಕಿಂತಲೂ ನೀವು ಹೆಚ್ಚಿನದನ್ನು ಹೊಂದಲು ಸಾಧ್ಯವಿಲ್ಲ. ಇದು ಈಗಾಗಲೇ ನಿರ್ಧಾರವಾಗಿದೆ. ಈ ಜೀವಿಯು ಜೀವನ ಸ್ಥಿತಿಯ ವಿವಿಧ ಶ್ರೇಣಿಗಳನ್ನು ಪಡೆಯುತ್ತದೆ, ಅವೆಲ್ಲವೂ ಹಿಂದಿನ ಕರ್ಮದ ಪ್ರಕಾರ, ದೈವೇನ, ದೈವ-ನೇತ್ರೇಣ (ಶ್ರೀ ಮ ಭಾ ೩.೩೧.೧), ಕರ್ಮಣಾ. ಆದ್ದರಿಂದ ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅದು ಪ್ರಕೃತಿಯ ನಿಯಮ, ನೀವು ಬದಲಾಯಿಸಲು ಸಾಧ್ಯವಿಲ್ಲ. ನೀವು ಏಕೆ ಜೀವನ ವೈವಿಧ್ಯಗಳು, ಸ್ಥಾನದ ವೈವಿಧ್ಯಗಳು, ವ್ಯವಹಾರದ ವೈವಿಧ್ಯಗಳನ್ನು ಪಡೆದಿದ್ದೀರಿ. ಅದು ಪ್ರಾರಬ್ಧವಾಗಿದೆ. ವಿಷಯಃ ಖಲು ಸರ್ವತಃ ಸ್ಯಾತ್ ( ಶ್ರೀ ಮ ಭಾ ೧೧.೯.೨೯). ವಿಷಯ, ಈ ಭೌತಿಕ ಆನಂದ-ಅಂದರೆ ತಿನ್ನುವುದು, ಮಲಗುವುದು, ಸಂಯೋಗ ಮತ್ತು ರಕ್ಷಿಸುವುದು-ಇವುಗಳು... ಮಾನದಂಡ ಮಾತ್ರ ವಿಭಿನ್ನವಾಗಿದೆ, ನಾನು ಏನನ್ನಾದರೂ ತಿನ್ನುತ್ತಿದ್ದೇನೆ, ನೀವು ಏನನ್ನಾದರೂ ತಿನ್ನುತ್ತಿದ್ದೀರಿ. ಬಹುಶಃ, ನನ್ನ ಲೆಕ್ಕಾಚಾರದಲ್ಲಿ ನೀವು ತಿನ್ನುವುದು ತುಂಬಾ ಚೆನ್ನಾಗಿಲ್ಲ, ನಿಮ್ಮ ಲೆಕ್ಕಾಚಾರದಲ್ಲಿ ನಾನು ತಿನ್ನುವುದು ತುಂಬಾ ಚೆನ್ನಾಗಿಲ್ಲ, ಆದರೆ ತಿನ್ನುವುದು ಒಂದೇ. ನೀವು ತಿನ್ನುತ್ತಿದ್ದೀರಿ. ನಾನು ತಿನ್ನುತ್ತಿದ್ದೇನೆ. ಆದ್ದರಿಂದ ಈ ಭೌತಿಕ ಪ್ರಪಂಚದಲ್ಲಿ ಸಂತೋಷದ ಮಾನದಂಡವು, ಮೂಲಭೂತ ತತ್ವವನ್ನು ಆಧಾರವಾಗಿ ತೆಗೆದುಕೊಂಡರೆ, ಅವೆಲ್ಲವೂ ಒಂದೇ ಆಗಿರುತ್ತದೆ. ಆದರೆ ನಾವು ಮಾಡಿಕೊಂಡಿದ್ದೇವೆ, 'ಇದು ಉತ್ತಮವಾದ ಮಾನದಂಡ. ಅದು ಕೆಟ್ಟದಾದ ಮಾನದಂಡ. ಇದು ತುಂಬಾ ಚೆನ್ನಾಗಿದೆ. ಇದು ತುಂಬಾ ಕೆಟ್ಟದು. ”
690622 - ಉಪನ್ಯಾಸ ಶ್ರೀ ಮ ಭಾ ೦೧.೦೫.೧೮-೧೯ - ನವ ವೃಂದಾವನ, ಯು ಯಸ್ ಏ