"ಆ ಸಮಯದಲ್ಲಿ ಸನಾತನ ಗೋಸ್ವಾಮಿಗೆ ಯಾವುದೇ ದೇವಾಲಯವಿರಲಿಲ್ಲ; ಅವರು ತಮ್ಮ ದೇವರನ್ನು ಮರದ ಮೇಲೆ ನೇತುಹಾಕುತ್ತಿದ್ದರು. ಆದ್ದರಿಂದ ಮದನ-ಮೋಹನನು ಅವರೊಂದಿಗೆ ಮಾತನಾಡುತ್ತಿದ್ದನು, 'ಸನಾತನ, ನೀನು ಈ ಎಲ್ಲಾ ಒಣ ಚಪಾತಿಗಳನ್ನು ತರುತ್ತಿರುವೆ ಮತ್ತು ಅದು ತಂಗಳಾಗಿದೆ ಮತ್ತು ನನಗೆ ನೀನು ಸ್ವಲ್ಪ ಉಪ್ಪನ್ನೂ ಕೊಡುವುದಿಲ್ಲ. ನಾನು ಹೇಗೆ ತಿನ್ನಲಿ?' ಸನಾತನ ಗೋಸ್ವಾಮಿ ಹೇಳಿದರು, 'ಸರ್, ನಾನು ಎಲ್ಲಿಗೆ ಹೋಗಲಿ? ನನಗೆ ಏನು ಸಿಕ್ಕರೂ ನಾನು ನಿಮಗೆ ಅರ್ಪಿಸುತ್ತೇನೆ. ನೀವು ದಯೆಯಿಂದ ಸ್ವೀಕರಿಸಿ. ನಾನು ಚಲಿಸಲು ಸಾಧ್ಯವಿಲ್ಲ; ಮುದುಕ. 'ನೀವು ನೋಡಿ, ಕೃಷ್ಣನು ಅದನ್ನು ತಿನ್ನಲೇ ಬೇಕಾಯಿತು. (ನಕ್ಕು) ಏಕೆಂದರೆ ಭಕ್ತನು ಅರ್ಪಿಸುತ್ತಿರುವುದರಿಂದ ಅವನು ನಿರಾಕರಿಸಲಾರನು. ಯೇ ಮಾಂ ಭಕ್ತ್ಯಾ ಪ್ರಯಚ್ಛತಿ. ನಿಜವಾದ ವಿಷಯ ಭಕ್ತಿ, ನೀವು ಕೃಷ್ಣನಿಗೆ ಏನು ಅರ್ಪಿಸಬಹುದು? ಸರ್ವಸ್ವವೂ ಕೃಷ್ಣನಿಗೆ ಸೇರಿದ್ದು. ನಿಮ್ಮದು ಎನ್ನುವುದೇನಿದೆ ? ನಿಮ್ಮ ಮೌಲ್ಯ ಏನು? ಮತ್ತು ನಿಮ್ಮಲ್ಲಿರುವ ವಸ್ತುಗಳ ಬೆಲೆ ಏನು? ಅದು ಏನೂ ಅಲ್ಲ. ಆದ್ದರಿಂದ ನಿಜವಾದ ವಿಷಯ ಭಕ್ತ್ಯಾ; ನಿಜವಾದ ವಿಷಯ ನಿಮ್ಮ ಭಾವನೆ. ಕೃಷ್ಣ, ದಯೆಯಿಂದ ಸ್ವೀಕರಿಸು, ನನಗೆ ಯಾವುದೇ ಅರ್ಹತೆ ಇಲ್ಲ, ನಾನು ಅತ್ಯಂತ ಹೀನನಾದವನು, ಪತಿತನು, ಆದರೆ (ಗದ್ಗದಿಸುತ್ತಾ) ನಾನು ನಿನಗಾಗಿ ಈ ವಸ್ತುವನ್ನು ತಂದಿದ್ದೇನೆ ದಯವಿಟ್ಟು ಸ್ವೀಕರಿಸು'. ಇದನ್ನು ಸ್ವೀಕರಿಸಲಾಗುತ್ತದೆ. ಉಬ್ಬಿಕೊಳ್ಳಬೇಡಿ. ಯಾವಾಗಲೂ ಜಾಗರೂಕರಾಗಿರಿ. ನೀವು ಕೃಷ್ಣನೊಂದಿಗೆ ವ್ಯವಹರಿಸುತ್ತಿರುವಿರಿ. ಅದು ನನ್ನ ವಿನಂತಿ. ತುಂಬಾ ಧನ್ಯವಾದಗಳು... (ಗದ್ಗದಿಸುತ್ತಾ)"
|