KN/690827 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹ್ಯಾಂಬರ್ಗ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಕೃಷ್ಣನ ಹೆಸರು ಮತ್ತು ಕೃಷ್ಣ ಬೇರೆ ಬೇರೆ ಅಲ್ಲ. ಆದ್ದರಿಂದ, ನನ್ನ ನಾಲಿಗೆಯು ಕೃಷ್ಣನ ಪವಿತ್ರ ನಾಮವನ್ನು ಮುಟ್ಟಿದ ತಕ್ಷಣ ಅದು ಕೃಷ್ಣನೊಂದಿಗೆ ಸಂಯೋಗವಾಗುತ್ತದೆ ಎಂದರ್ಥ. ಆದ್ದರಿಂದ ಒಂದು ವೇಳೆ ನೀವು " ಹರೇ ಕೃಷ್ಣ" ಈ ಮಂತ್ರವನ್ನು ಜಪಿಸುತ್ತಾ ಕೃಷ್ಣನೊಂದಿಗೆ ನಿರಂತರವಾಗಿ ಸಂಬಂಧವನ್ನು ಇಟ್ಟುಕೊಂಡಿದ್ದರೆ, ಆಗ ಈ ಪ್ರಕ್ರಿಯೆಯಿಂದ ನೀವು ಹೇಗೆ ಸುಲಭವಾಗಿ ಶುದ್ಧರಾಗುತ್ತೀರಿ, ಜಪ ಮಾಡುತ್ತೀರಿ ಎಂದು ಊಹಿಸಿ, ಜಪಿಸುವುದು, ಜಿಹ್ವಾದೌ, ನಾಲಿಗೆಯನ್ನು ಜಪಿಸುವುದರಲ್ಲಿ ತೊಡಗಿಸಿಕೊಳ್ಳುವುದು. ಮತ್ತು ರುಚಿ ನೋಡಲು ನಿಮ್ಮ ನಾಲಿಗೆ ರುಚಿಕರವಾದ ಭಕ್ಷ್ಯಗಳನ್ನು ಬಯಸುತ್ತದೆ. ಆದ್ದರಿಂದ ಕೃಷ್ಣನು ತುಂಬಾ ಕರುಣಾಮಯಿ, ಅವನು ನಿಮಗೆ ನೂರಾರು ಮತ್ತು ಸಾವಿರಾರು ರುಚಿಕರವಾದ ಭಕ್ಷ್ಯಗಳನ್ನು ನೀಡಿದ್ದಾನೆ, ಅವನು ಸೇವಿಸಿದ ಆಹಾರದ ಅವಶೇಷಗಳು. ನೀವು ತಿನ್ನಿರಿ. ಈ ರೀತಿಯಾಗಿ, ನೀವು ಕೇವಲ ಒಂದು ಸಂಕಲ್ಪವನ್ನು ಮಾಡಿದರೆ, 'ಕೃಷ್ಣನಿಗೆ ಅರ್ಪಿಸದ ಯಾವುದನ್ನೂ ನನ್ನ ನಾಲಿಗೆಗೆ ರುಚಿಸುವುದನ್ನು ಬಿಡುವುದಿಲ್ಲ ಮತ್ತು ನಾನು ನನ್ನ ನಾಲಿಗೆಯನ್ನು ಯಾವಾಗಲೂ ಹರೇ ಕೃಷ್ಣನ ಜಪದಲ್ಲಿ ತೊಡಗಿಸಿಕೊಳ್ಳುತ್ತೇನೆ' , ನಂತರ ಎಲ್ಲಾ ಪರಿಪೂರ್ಣತೆ ನಿಮ್ಮ ಹಿಡಿತದಲ್ಲಿದೆ."
690827 - ಉಪನ್ಯಾಸ ದೀಕ್ಷೆ - ಹ್ಯಾಂಬರ್ಗ್