KN/690905 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹ್ಯಾಂಬರ್ಗ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಧ್ಯಾತ್ಮಿಕ ಗುರುಗಳು ಹೊಸ ಆವಿಷ್ಕಾರವಲ್ಲ. ಅದು ಕೇವಲ ಆಧ್ಯಾತ್ಮಿಕ ಗುರುಗಳ ಆದೇಶವನ್ನು ಅನುಸರಿಸುವುದು. ಆದ್ದರಿಂದ ಇಲ್ಲಿ ಇರುವ ನನ್ನ ಎಲ್ಲಾ ಶಿಷ್ಯರು ತುಂಬಾ ಅಭಾರಿಯ ಭಾವನೆಯನ್ನು ಹೊಂದುತ್ತಿದ್ದಾರೆ ... ನಾನು ಕೂಡ ಅವರಿಗೆ ಆಭಾರಿಯಾಗಿದ್ದೇನೆ ಏಕೆಂದರೆ ಅವರು ಈ ಧರ್ಮ ಪ್ರಚಾರ ಕಾರ್ಯದಲ್ಲಿ ನನಗೆ ಸಹಾಯ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ನಾನು ಅವರೆಲ್ಲರನ್ನು ಆಧ್ಯಾತ್ಮಿಕ ಗುರುಗಳಾಗಲು ವಿನಂತಿಸುತ್ತೇನೆ. ಮುಂದೆ ನೀವು ಪ್ರತಿಯೊಬ್ಬರೂ ಆಧ್ಯಾತ್ಮಿಕ ಗುರುಗಳಾಗಬೇಕು. ಮತ್ತು ಆ ಕರ್ತವ್ಯ ಏನು? ನೀವು ನನ್ನಿಂದ ಏನನ್ನು ಕೇಳುತ್ತಿರುವಿರೋ, ನೀವು ನನ್ನಿಂದ ಏನು ಕಲಿಯುತ್ತಿರುವಿರೋ ಅದನ್ನು ನೀವು ಯಾವುದೇ ಸೇರ್ಪಡೆ ಅಥವಾ ಬದಲಾವಣೆಯಿಲ್ಲದೆ ಸಂಪೂರ್ಣವಾಗಿ ವಿತರಿಸಬೇಕು. ಆಗ ನೀವೆಲ್ಲರೂ ಆಧ್ಯಾತ್ಮಿಕ ಗುರುಗಳಾಗುತ್ತೀರಿ. ಅದು ಆಧ್ಯಾತ್ಮಿಕ ಗುರುಗಳಾಗುವ ವಿಜ್ಞಾನವಾಗಿದೆ. ಆಧ್ಯಾತ್ಮಿಕ ಗುರುಗಳಾಗುವುದು ತುಂಬಾ ಅಲ್ಲ... ಆಧ್ಯಾತ್ಮಿಕ ಗುರುಗಳಾಗುವುದು ತುಂಬಾ ಆಶ್ಚರ್ಯಕರವಲ್ಲ. ಸುಮ್ಮನೆ ಒಬ್ಬರು ಪ್ರಾಮಾಣಿಕ ಜೀವವಾಗಬೇಕು. ಅಷ್ಟೆ."
690905 - ಉಪನ್ಯಾಸ ಆವಿರ್ಭಾವ ಉತ್ಸವ ದಿನ, ಶ್ರೀ ವ್ಯಾಸ-ಪೂಜೆ - ಹ್ಯಾಂಬರ್ಗ್