KN/690907 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹ್ಯಾಂಬರ್ಗ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯು ಅಂತಿಮ ಚರಮದಲ್ಲಿ ಹೇಳುತ್ತದೆ, ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ- ೧೮.೬೬) 'ನನ್ನ ಪ್ರಿಯ ಅರ್ಜುನ...' ಅವನು ಅರ್ಜುನನಿಗೆ ಭೋಧಿಸುತ್ತಿದ್ದಾನೆ. ಕೇವಲ ಅರ್ಜುನನಿಗೆ ಅಲ್ಲ, ಆದರೆ ಎಲ್ಲಾ ಮಾನವ ಸಮಾಜಕ್ಕೆ - ನೀವು ನಿಮ್ಮ ಸೃಷ್ಟಿಸಿದ ಎಲ್ಲಾ ಔದ್ಯೋಗಿಕ ಕರ್ತವ್ಯಗಳನ್ನು ಬಿಟ್ಟುಬಿಡಿ. ನೀವು ಸುಮ್ಮನೆ ನನ್ನ ಪ್ರಸ್ತಾಪವನ್ನು ಒಪ್ಪಿಕೊಳ್ಳಿ ಮತ್ತು ನಾನು ನಿಮಗೆ ಎಲ್ಲಾ ರಕ್ಷಣೆಯನ್ನು ನೀಡುತ್ತೇನೆ. ಇದರರ್ಥ ನಾವು ನಮ್ಮ ಪ್ರತ್ಯೇಕತೆಯನ್ನು ಕಳೆದುಕೊಳ್ಳುತ್ತೇವೆ ಎಂದಲ್ಲ. ಹೇಗೆ ಕೃಷ್ಣನು ಅರ್ಜುನನಿಗೆ ಹೇಳುತ್ತಾನೋ , 'ನೀನು ಮಾಡು', ಆದರೆ ಆತನು ಅವನನ್ನು ಒತ್ತಾಯಿಸುವುದಿಲ್ಲ, 'ನೀನು ಮಾಡು'. 'ನಿನಗೆ ಇಷ್ಟವಾದರೆ, ನೀನು ಮಾಡು'. ಕೃಷ್ಣನು ನಿಮ್ಮ ಸ್ವಾತಂತ್ರ್ಯವನ್ನು ಮುಟ್ಟುವುದಿಲ್ಲ. ಅವನು ನಿಮ್ಮನ್ನು 'ನೀನು ಮಾಡು' ಎಂದು ಸರಳವಾಗಿ ವಿನಂತಿಸುತ್ತಾನೆ. ನಾವು ನಮ್ಮ ಪ್ರಜ್ಞೆಯನ್ನು ಪರಮ ಪ್ರಜ್ಞೆಯೊಂದಿಗೆ ಬೆಳೆಸಿದರೆ ನಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ಮೂಲಕ ನಾವು ಸಂತೋಷ ಮತ್ತು ಶಾಂತಿಯುತರಾಗಬಹುದು."
690907 - ಉಪನ್ಯಾಸ ಶ್ರೀ ಮ ಭಾ ೦೭.೦೯.೧೯ - ಹ್ಯಾಂಬರ್ಗ್