"ಮಾಯೆ ಇದ್ದಾಳೆ. ಆದ್ದರಿಂದ ಕೃಷ್ಣನು ಹೇಳುತ್ತಾನೆ, 'ಮಾಯೆಯು ತುಂಬಾ ಬಲಶಾಲಿ'. ಆದರೆ ನೀವು ಕೃಷ್ಣನನ್ನು ತುಂಬಾ ..., ಹೆಚ್ಚು ಬಲವಾಗಿ ಹಿಡಿದರೆ, ಆಗ ಮಾಯೆಯು ಏನನ್ನೂ ಮಾಡಲಾರಳು. ನಿಮ್ಮ ಜಪವನ್ನು ಯಾವುದಾದರೂ ಪ್ರತಿರೋಧಿಸುತ್ತಿದ್ದರೆ, ಆಗ ನೀವು ಹೆಚ್ಚು ಗಟ್ಟಿಯಾಗಿ ಜಪವನ್ನು ಮಾಡಬೇಕಾಗುತ್ತದೆ. : ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ಆದ್ದರಿಂದ ನೀವು ಮಾಯೆಯನ್ನು ಸೋಲಿಸಬಹುದು. ಔಷಧಿ ಒಂದೇ. ಕನಿಷ್ಠ, ನಾನು ಹಾಗೆ ಮಾಡುತ್ತೇನೆ. ನಾನು ಯಾವುದಾದರೂ ಅಪಾಯದಲ್ಲಿರುವಾಗ, ನಾನು ಹರೇ ಕೃಷ್ಣ ಎಂದು ಜೋರಾಗಿ ಜಪಿಸುತ್ತೇನೆ: ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ (ನಗು) ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ಅಷ್ಟೇ. ಭಕ್ತಿವಿನೋದ್ ಠಾಕೂರ ......... ಅಲ್ಲೊಂದು ಪದ್ಯವಿದೆ: ಜಾಯ್ ಸಕಲ್ ಬಿಪೋದ್ ಗಯ ಭಕ್ತಿವಿನೋದ್ ಬೋಲೆ ಜಖೋನ್ ಒ-ನಾಮ್ ಗಾಯಿ (ಗೀತಾಾವಳಿಯಿಂದ). ಅವರು ಹೇಳುತ್ತಾರೆ, "ನಾನು ಈ ಹರೇ ಕೃಷ್ಣನನ್ನು ಜಪಿಸಿದ ತಕ್ಷಣ, ನಾನು ಎಲ್ಲಾ ಅಪಾಯಗಳಿಂದ ತಕ್ಷಣವೇ ಮುಕ್ತನಾಗುತ್ತೇನೆ."
|