KN/690911 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
ಪ್ರಭುಪಾದ: ಮಂತ್ರಕ್ಕೆ ಶಕ್ತಿ ಇದ್ದರೆ ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು. ಅದು ಏಕೆ ರಹಸ್ಯವಾಗಿರಬೇಕು? ಜಾರ್ಜ್ ಹ್ಯಾರಿಸನ್: ನಮ್ಮಲ್ಲಿರುವ ಮಂತ್ರಗಳನ್ನು ಎಲ್ಲಾ ಜನರು ಪಡೆಯಬಹುದು, ಆದರೆ ಅವರು ಅದನ್ನು ಬೇರೆಯವರಿಂದ ಪಡೆಯಬೇಕು. ನಾವು ಅದನ್ನು ಅವರಿಗೆ ನೀಡಲು ಸಾಧ್ಯವಿಲ್ಲ, ಆದರೆ ಇದು ಎಲ್ಲರಿಗೂ ಲಭ್ಯವಿದೆ. ಪ್ರಭುಪಾದ: ಹೌದು. ಮಂತ್ರ, ಅದು ಮೌಲ್ಯಯುತವಾಗಿದ್ದರೆ, ಅದು ಎಲ್ಲರಿಗೂ ಮೌಲ್ಯಯುತವಾಗಿರುತ್ತದೆ. ಅದು ನಿರ್ದಿಷ್ಟ ವ್ಯಕ್ತಿಗೆ ಏಕೆ ಇರಬೇಕು? ಜಾನ್ ಲೆನ್ನನ್: ಎಲ್ಲ ಮಂತ್ರಗಳು... ಎಲ್ಲ ಮಂತ್ರಗಳು ಕೇವಲ ಭಗವಂತನ ನಾಮವಾದರೆ. ಅದು ರಹಸ್ಯ ಮಂತ್ರವಾಗಲಿ ಅಥವಾ ಬಹಿರಂಗ ಮಂತ್ರವಾಗಲಿ ಎಲ್ಲವೂ ಭಗವಂತನ ನಾಮವೇ. ಆದ್ದರಿಂದ ಇದು ನಿಜವಾಗಿಯೂ ಹೆಚ್ಚು ವ್ಯತ್ಯಾಸವನ್ನು ಮಾಡುವುದಿಲ್ಲ, ಅಲ್ಲವೇ? ನೀವು ಯಾವುದನ್ನು ಹಾಡುತ್ತೀರಿ? ಪ್ರಭುಪಾದ: ಇಲ್ಲ. ಹೇಗೆ ಔಷಧಿ ಅಂಗಡಿಯಲ್ಲಿ ಅವರು ರೋಗಕ್ಕೆ ಎಲ್ಲ ಔಷಧಿಗಳನ್ನು ಮಾರುತ್ತಾರೆ, ರೋಗವನ್ನು ಗುಣಪಡಿಸುತ್ತಾರೆ. ಆದರೂ ಒಂದು ನಿರ್ದಿಷ್ಟ ರೀತಿಯ ಔಷಧಿಯನ್ನು ತೆಗೆದುಕೊಳ್ಳಲು ನೀವು ವೈದ್ಯರ ಔಷಧ ಚೀಟಿಯನ್ನು ಪಡೆಯಬೇಕಾಗುತ್ತದೆ. ಅವರು ನಿಮಗೆ ಕೊಡುವುದಿಲ್ಲ. ನೀವು ಔಷಧಿ ಅಂಗಡಿಗೆ ಹೋಗಿ, "ನನಗೆ ಕಾಯಿಲೆ ಇದೆ, ನೀವು ನನಗೆ ಯಾವುದಾದರು ಔಷಧಿ ಕೊಡಿ" ಎಂದು ನೀವು ಕೇಳಿದರೆ, ಅದಲ್ಲ... ಅವರು ನಿಮ್ಮನ್ನು ಕೇಳುತ್ತಾರೆ, "ನಿಮ್ಮ ಔಷಧಿ ಚೀಟಿ ಎಲ್ಲಿದೆ?" ಅದೇ ರೀತಿ, ಈ ಯುಗದಲ್ಲಿ, ಕಲಿಯುಗದಲ್ಲಿ, ಈ ಮಂತ್ರ, ಹರೇ ಕೃಷ್ಣ ಮಂತ್ರವನ್ನು ಶಾಸ್ತ್ರಗಳಲ್ಲಿ ಶಿಫಾರಸು ಮಾಡಲಾಗಿದೆ ಮತ್ತು ಮಹಾನ್ ಧೀಮಂತ — ನಾವು ಅವರನ್ನು ಕೃಷ್ಣನ ಅವತಾರ ಎಂದು ಪರಿಗಣಿಸುತ್ತೇವೆ — ಚೈತನ್ಯ ಮಹಾಪ್ರಭುಗಳು, ಅವರು ಇದನ್ನು ಬೋಧಿಸಿದರು. ಆದ್ದರಿಂದ ನಮ್ಮ ತತ್ವ ಏನೆಂದರೆ ಎಲ್ಲರೂ ಅನುಸರಿಸಬೇಕು. ಮಹಾಜನೊ ಯೇನ ಗತಃ ಸ ಪಂಥಾಃ (ಚೈ.ಚ. ಮಧ್ಯ 17.186). ನಾವು ಮಹಾನ್ ಅಧಿಕಾರಿಗಳ ಹೆಜ್ಜೆಯನ್ನು ಅನುಸರಿಸಬೇಕು. ಅದು ನಮ್ಮ ವ್ಯವಹಾರ. |
690911 - ಸಂಭಾಷಣೆ with John Lennon, Yoko Ono and George Harrison - ಟಿಟನ್ಹರ್ಸ್ಟ್ |