"ಕೃಷ್ಣ ಪ್ರಜ್ಞೆ ಎಂದರೆ ಭಗವಂತನ ಕರುಣೆಯಿಂದ ನಾವು ಏನನ್ನೇ ಪಡೆದರೂ ನಾವು ತೃಪ್ತರಾಗಬೇಕು. ಅಷ್ಟೇ. ಆದ್ದರಿಂದ ನಾವು ನಮ್ಮ ವಿದ್ಯಾರ್ಥಿಗಳಿಗೆ ಮದುವೆಯಾಗಬೇಕೆಂದು ಸೂಚಿಸುತ್ತೇವೆ. ಏಕೆಂದರೆ ಅದೊಂದು ಸಮಸ್ಯೆ. ಲೈಂಗಿಕ ಜೀವನವು ಒಂದು ಸಮಸ್ಯೆ. ಆದ್ದರಿಂದ ಪ್ರತಿಯೊಂದು ಸಮಾಜದಲ್ಲಿ ಈ ಮದುವೆ ಇದೆ — ಹಿಂದೂ ಸಮಾಜ ಅಥವಾ ಕ್ರಿಶ್ಚಿಯನ್ ಅಥವಾ ಮುಹಮ್ಮದ್‌ನ ಸಮಾಜ. ಮದುವೆಯನ್ನು ಧಾರ್ಮಿಕ ವಿಧಿಗಳ ಅಡಿಯಲ್ಲಿ ಮಾಡಲಾಗುತ್ತದೆ. ಅಂದರೆ ಒಬ್ಬನು ತೃಪ್ತನಾಗಬೇಕು: 'ಓ, ಭಗವಂತನು ನನಗೆ ಈ ವ್ಯಕ್ತಿಯನ್ನು ನನ್ನ ಗಂಡನನ್ನಾಗಿ ಕಳುಹಿಸಿದ್ದಾನೆ'. ಮತ್ತು ಪುರುಷನು ಯೋಚಿಸಬೇಕು, 'ಭಗವಂತನು ನನಗೆ ಈ ಮಹಿಳೆಯನ್ನು, ಈ ಸುಂದರವಾದ ಮಹಿಳೆಯನ್ನು ನನ್ನ ಹೆಂಡತಿಯಾಗಿ ಕಳುಹಿಸಿದ್ದಾನೆ. ನಾವು ಶಾಂತಿಯುತವಾಗಿ ಬದುಕೋಣ'. ಆದರೆ ನಾನು ಬಯಸಿದರೆ, 'ಓ, ಈ ಹೆಂಡತಿ ಚೆನ್ನಾಗಿಲ್ಲ. ಆ ಹುಡುಗಿ ಚೆನ್ನಾಗಿರುವಳು', 'ಈ ಪುರುಷನು ಒಳ್ಳೆಯವನಲ್ಲ. ಆ ಪುರುಷನು ಒಳ್ಳೆಯವನು’ ಎಂದಾಗ ಎಲ್ಲವೂ ನಾಶವಾಗುತ್ತದೆ."
|