"ಖಂಡಿತವಾಗಿಯೂ, ಕೃಷ್ಣನ ಬಳಿಗೆ ಅಥವಾ ಕೃಷ್ಣನ ಪ್ರತಿನಿಧಿಯ ಬಳಿಗೆ ಯಾರೇ ಬಂದರು, ಅವನು ತನ್ನ ಹಿಂದಿನ ಪಾಪ ಕರ್ಮಗಳ ಎಲ್ಲಾ ಪ್ರತಿಕ್ರಿಯೆಗಳನ್ನು ಮುಗಿಸಿದ್ದಾನೆ ಎಂದರ್ಥವಲ್ಲ. ಅದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರ ಹಿಂದಿನ ಪಾಪಗಳ ಪ್ರತಿಕ್ರಿಯೆಗಳಿಂದ ತುಂಬಿದ್ದಾರೆ... ಈ ಐಹಿಕ ಪ್ರಪಂಚದಲ್ಲಿ, ನೀವು ಏನೇ ಮಾಡಿದರೂ ಹೆಚ್ಚು ಕಡಿಮೆ ಅವೆಲ್ಲ ಪಾಪದ ಚಟುವಟಿಕೆಗಳೇ, ಆದ್ದರಿಂದ, ನಮ್ಮ ಜೀವನವು ಯಾವಾಗಲೂ ಪಾಪ ಚಟುವಟಿಕೆಗಳಿಂದ ತುಂಬಿರುತ್ತದೆ, ಆದ್ದರಿಂದ ನೀವು ಪಾರದರ್ಶಕ ಮಾಧ್ಯಮದ ಮೂಲಕ ಕೃಷ್ಣನಿಗೆ ಶರಣಾದಾಗ, ತಕ್ಷಣವೇ ನಿಮ್ಮ ಪಾಪ ಚಟುವಟಿಕೆಗಳು ನಿಲ್ಲುವುದಿಲ್ಲ. ಆದರೆ ನೀವು ಪರಮ ಪ್ರಭುವಿಗೆ ಶರಣಾದ ಕಾರಣ ಆತನು ನಿಮ್ಮ ಪಾಪಕರ್ಮಗಳನ್ನು ಹೀರಿಕೊಳ್ಳುತ್ತಾನೆ. ಅವನು ನಿಮ್ಮನ್ನು ಮುಕ್ತಗೊಳಿಸುತ್ತಾನೆ. ಆದರೆ "ನಾನು ಇನ್ನು ಮುಂದೆ ಮತ್ತೆ ಮಾಡಲಾರೆ" ಎಂದು ನೀವು ಜಾಗೃತರಾಗಿರಬೇಕು."
|