"ಅದನ್ನು ನಾವು ಕೀರ್ತನೆ ಮಾಡುವ ಮೂಲಕ ಮುಕ್ತವಾಗಿ ವಿತರಿಸುತ್ತಿದ್ದೇವೆ. ನೀವು ನಮ್ಮೊಂದಿಗೆ ಸೇರಿಕೊಳ್ಳಿ, ನೀವು ನಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ನಮ್ಮ ತತ್ವ ಏನು? ನಮ್ಮ ಹತ್ತಿರ 'ಬ್ಯಾಕ್ ಟು ಗಾಡ್ಹೆಡ್' ಎಂಬ ಮಾಸಿಕ ಪತ್ರಿಕೆಯಿದೆ, ನಮ್ಮಲ್ಲಿ ಅನೇಕ ಪ್ರಕಟಣೆಗಳಿವೆ: ಭಗವದ್ಗೀತಾ ಯಥಾರೂಪ, ಶ್ರೀ ಚೈತನ್ಯ ಶಿಕ್ಷಾಮೃತ. ನೀವು ಈ ಆಂದೋಳನವನ್ನು ತತ್ವಶಾಸ್ತ್ರ, ವಿಜ್ಞಾನ, ವಾದದ ಮೂಲಕ ಅರ್ಥಮಾಡಿಕೊಳ್ಳಲು ಬಯಸಿದರೆ, ನಾವು ಸಿದ್ಧರಿದ್ದೇವೆ. ನಿಮಗೆ ಸಾಕಷ್ಟು ಅವಕಾಶವಿದೆ, ಆದರೆ ನೀವು ಸರಳವಾಗಿ ಜಪ ಮಾಡಿದರೆ, ಯಾವುದೇ ಶಿಕ್ಷಣದ ಅಗತ್ಯವಿಲ್ಲ, ಯಾವುದೇ ತತ್ವಜ್ಞಾನದ ಅಗತ್ಯವಿಲ್ಲ. ಜಪಿಸಿ - ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಮತ್ತು ನೀವು ಎಲ್ಲವನ್ನೂ ಗಳಿಸುವಿರಿ."
|