KN/690916b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆನಂದ ಎಂದರೆ ಅನಿಯಮಿತ, ಅನಿಯಂತ್ರಿತ ಆನಂದ, ಯಾವುದೇ ಷರತ್ತುಗಳಿಲ್ಲದೆ. ಅದು ನಿಜವಾದ ಆನಂದ, ಯಾವುದಾದರು ನಿರ್ಬಂಧವಿದ್ದರೆ, ಷರತ್ತು ಇದ್ದರೆ... ಇಲ್ಲಿಯಂತೆಯೇ, ನಾನು ರೆಸ್ಟೋರೆಂಟ್‌ಗೆ ಹೋದರೆ, ಷರತ್ತು ಏನೆಂದರೆ - ನೀವು ಮೊದಲು ಪಾವತಿಸಬೇಕು, ಅನಂತರ ನೀವು ಏನನ್ನಾದರೂ ಆನಂದಿಸಿ. ಅದೇ ರೀತಿ, ನಾನು ಉತ್ತಮವಾದ ಅಪಾರ್ಟ್ಮೆಂಟ್, ಸುಂದರವಾದ ಮನೆಯನ್ನು ಆನಂದಿಸಬೇಕಾದರೆ, ಮೊದಲು ಇಷ್ಟು ಡಾಲರ್, ಇಷ್ಟು ಪೌಂಡ್ಗಳನ್ನು ಪಾವತಿಸಿ ಮತ್ತು ನಂತರ ಆನಂದಿಸಿ. ಷರತ್ತು ಇದೆ. ಆದರೆ ಬ್ರಹ್ಮ-ಸೌಖ್ಯದಲ್ಲಿ, ಅಂತಹ ಷರತ್ತುಗಳಿಲ್ಲ, ನೀವು ಸರಳವಾಗಿ, ನೀವು ಆ ವೇದಿಕೆಯನ್ನು ಸಮೀಪಿಸಲು ಸಾಧ್ಯವಾದರೆ, ಆಗ... ಅದರ ಅರ್ಥ ಇದು - ರಾಮ. ಇತಿ ರಾಮ-ಪದೇನಾಸೌ ಪರಂ ಬ್ರಹ್ಮ ಇತಿ ಅಭಿಧೀಯತೇ (ಚೈ.ಚ ಮಧ್ಯ 9.29). ರಾಮ. ರಾಮ ಎಂದರೆ ರಮಣ. ರಾಮ. ದೇವೋತ್ತಮ ಪರಮ ಪುರುಷ, ಭಗವಾನ್ ರಾಮ. ನೀವು ಅವನ ಸಹವಾಸ ಮಾಡಿದರೆ, ರಾಮ ಅಥವಾ ಕೃಷ್ಣ ಅಥವಾ ವಿಷ್ಣು, ನಾರಾಯಣ... ನಾರಾಯಣ ಪರಾ ಅವ್ಯಕ್ತಾತ್, ಅವನು ದಿವ್ಯನು. ಹಾಗಾಗಿ ಹೇಗಾದರೂ ಮಾಡಿ, ಅವನ ಸಂಗವನ್ನು ಪಡೆದರೆ, ನೀವು ಆ ಸ್ಥಾನಕ್ಕೆ ಏರಿದರೆ, ನೀವು ಅನಂತ ಅನಿಯಮಿತ ಆನಂದವನ್ನು ಪಡೆಯುತ್ತೀರಿ."
690916 - ಉಪನ್ಯಾಸ - ಲಂಡನ್