"ಆದ್ದರಿಂದ ಅವರು ..., ಅಂದರೆ ನಮ್ಮ ವಿಜ್ಞಾನಿಗಳೆಂದು ಹೇಳಿಕೊಳ್ಳುತ್ತಾರೋ ಅವರು ಕೇವಲ ಅವಿವೇಕಿಗಳು. ಅವರು ಹೇಳುತ್ತಾರೆ, "ಇಲ್ಲ, ಚಂದ್ರನ ಗ್ರಹದಲ್ಲಿ ಯಾವುದೇ ಜೀವಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ..., ಚಂದ್ರ ಗ್ರಹ ಅಥವಾ ಸೂರ್ಯಗ್ರಹ." ಅವರು ಹಾಗೆ ಹೇಳುತ್ತಾರೆ. ಆದರೆ ನಮ್ಮ ವೈದಿಕ ಸಾಹಿತ್ಯವು ಹಾಗೆ ಹೇಳುವುದಿಲ್ಲ, ಜೀವಿಗಳು,.... ಸರ್ವ-ಗಃ ಹೀಗೆಂದು ಹೇಳಿದೆ. ಅವರು ಎಲ್ಲಿ ಬೇಕಾದರೂ ಹೋಗಬಹುದು ಮತ್ತು ಅವರು ಎಲ್ಲಿ ಬೇಕಾದರೂ ಬದುಕಬಹುದು. ಸರ್ವ-ಗಃ. ಸರ್ವ ಎಂದರೆ ಸರ್ವವೂ, ಗಃ ಎಂದರೆ ಹೋಗುವುದು. ನೀವು ಹೋಗಬಹುದು. ಇಲ್ಲಿ ಲಂಡನ್ ನಗರದಲ್ಲಿ ಕುಳಿತಿರುವಂತೆಯೇ, ನೀವು ಇಲ್ಲಿ ಹೇಗೆ ಕುಳಿತಿರುವಿರೋ, ನೀವು ಬೇರೆ ಯಾವುದೇ ಭಾಗಕ್ಕೆ ಹೋಗಬಹುದು, ಹಾಗೆಯೇ ನೀವು ಬ್ರಹ್ಮಾಂಡದ ಯಾವುದೇ ಭಾಗಕ್ಕೆ ಅಥವಾ ಭಗವಂತನ ಸೃಷ್ಟಿಯ ಯಾವುದೇ ಭಾಗಕ್ಕೆ ಹೋಗಬಹುದು. ಅಲ್ಲಿ ಭೌತಿಕ ಪ್ರಪಂಚವಿದೆ, ಆಧ್ಯಾತ್ಮಿಕ ಜಗತ್ತು ಇದೆ, ನೀವು ಎಲ್ಲೆಡೆ ಹೋಗಬಹುದು. ಆದರೆ ನೀವು ಅಲ್ಲಿಗೆ ಹೋಗಲು ಸಮರ್ಥರಾಗಿರಬೇಕು."
|