"ಮಾಯವಾದಿ ತತ್ವಜ್ಞಾನಿಯು "ನಾನೇ ದೇವರು, ಆದರೆ ನಾನು, ಮಾಯೆಯಿಂದ, ನಾನು ದೇವರಲ್ಲ ಎಂದು ಭಾವಿಸುತ್ತಿದ್ದೇನೆ. ಆದ್ದರಿಂದ ಧ್ಯಾನದಿಂದ ನಾನು ದೇವರಾಗುತ್ತೇನೆ." ಅಂದರೆ ಇದರರ್ಥ ಅವನು ಮಾಯೆಯ ಶಿಕ್ಷೆಗೆ ಒಳಗಾಗಿದ್ದಾನೆ. ಆದ್ದರಿಂದ ದೇವರು ಮಾಯೆಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಅದು ಹೇಗೆ? ದೇವರು ದೊಡ್ಡವರು, ಮತ್ತು ಅವರು ಮಾಯೆಯ ಪ್ರಭಾವದಲ್ಲಿದ್ದರೆ, ಆಗ ಮಾಯೆಯು ದೊಡ್ಡದಾಗುತ್ತದೆ. ದೇವರು ಹೇಗೆ ದೊಡ್ಡವರಾಗುತ್ತಾರೆ? ಹಾಗಾದರೆ ನಿಜವಾದ ವಿಚಾರವೆಂದರೆ, "ನಾನೇ ದೇವರು", "ದೇವರು ಇಲ್ಲ", "ಎಲ್ಲರೂ ದೇವರೇ", ಹೀಗೆ ಹಲವಾರು ವಿಷಯಗಳ ಬಗ್ಗೆ ನಾವು ಈ ಭ್ರಮೆಯನ್ನು ಎಲ್ಲಿಯವರೆಗೆ ಮುಂದುವರಿಸುತ್ತೇವೆಯೋ, ಅಲ್ಲಿಯವರೆಗೂ ದೇವರ ಅನುಗ್ರಹವನ್ನು ಪಡೆಯುವ ಪ್ರಶ್ನೆಯೇ ಇಲ್ಲ."
|