KN/710130d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನನ್ನು ಅವನ ಅರವತ್ನಾಲ್ಕು ಗುಣಗಳಲ್ಲಿ ಒಂದಾದ ʼಬಹುದಕ್ʼ ಎಂಬ ಗುಣವಾಚಕ ನಾಮದಿಂದ ಕೂಡ ಕರೆಯಲಾಗುತ್ತದೆ. ಅದನ್ನು ʼಭಕ್ತಿ ರಸಾಮೃತ ಸಿಂಧುʼ ಧರ್ಮಗ್ರಂಥದಲ್ಲಿ ವಿವರಿಸಲ್ಪಟ್ಟಿದೆ. ಅಂದರೆ ಅವನು ಯಾವುದೇ ಜೀವಿಯೊಂದಿಗೆ ಮಾತನಾಡಬಲ್ಲನು. ಯಾಕಿಲ್ಲ? ಅವನು ಪ್ರತಿಯೊಂದು ಜೀವಿಯ ತಂದೆಯಾದರೆ, ಏಕೆ ಅವುಗಳ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು? ಅದು ಸಹಜ. ತಂದೆ ತನ್ನ ಮಗನ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬುದು ನಿಜವಲ್ಲವೇ? ಕೃಷ್ಣನು ಎಲ್ಲಾ ಜೀವರಾಶಿಗಳ ತಂದೆಯಾಗಿರುವಾಗ, ಅವನು ಪಕ್ಷಿಗಳು, ಜೇನುನೊಣಗಳು, ಮರಗಳು, ಮನುಷ್ಯ — ಎಲ್ಲರ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಸಹಜ. ಆದ್ದರಿಂದ, ಕೃಷ್ಣನ ಇನ್ನೊಂದು ಗುಣ ʼಬಹುದಕ್.ʼ ಇದು ಕೃಷ್ಣನಿದ್ದಾಗ ಸಾಬೀತಾಯಿತು. ಒಂದು ದಿನ, ಕೃಷ್ಣನು ಪಕ್ಷಿಯ ಮಾತಿಗೆ ಉತ್ತರಿಸುತ್ತಿದ್ದನು. ಆಗ, ಯಮುನೆಯಿಂದ ನೀರು ತೆಗೆದುಕೊಳ್ಳಲು ಬಂದ ಒಬ್ಬ ಮುದುಕಿ ಕೃಷ್ಣನು ಪಕ್ಷಿಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಚಕಿತಳಾದಳು: "ಓಹ್, ಕೃಷ್ಣನು ಎಂಥಾ ಚಮತ್ಕಾರಿ."
710130 - ಉಪನ್ಯಾಸ SB 06.02.46 - ಅಲಹಾಬಾದ್