" ಕೃಷ್ಣ, ಅಥವಾ ಪರಮಾತ್ಮನು, ಪ್ರತಿಯೊಬ್ಬರ ಹೃದಯದಲ್ಲಿ ಜೀವಿಸುತ್ತಿದ್ದಾನೆ. ಬೆಕ್ಕುಗಳು, ನಾಯಿಗಳು ಮತ್ತು ಹಂದಿಗಳಿವೆ - ಅವುಗಳು ಸಹ ಜೀವಿಗಳು, ಜೀವಿಗಳು - ಆದ್ದರಿಂದ ಕೃಷ್ಣನು ಅವರ ಹೃದಯದಲ್ಲಿಯೂ ವಾಸಿಸುತ್ತಿದ್ದಾನೆ. ಆದರೆ ಅವನು ಹಂದಿಯೊಂದಿಗೆ ಅಂತ ಅಸಹ್ಯಕರವಾದ ಸ್ಥಿತಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಅರ್ಥವಲ್ಲ. ಅವನಿಗೆ ತನ್ನದೇ ಆದ ವೈಕುಂಠವಿದೆ. ಅವನು ಎಲ್ಲಿಗೆ ಹೋದರೂ ಅಲ್ಲಿ ವೈಕುಂಠ. ಹಾಗೆಯೇ, ಒಬ್ಬನು ಜಪಿಸುವಾಗ, ಆ ಪಠಣ... ಪವಿತ್ರ ನಾಮಕ್ಕೂ ಕೃಷ್ಣನಿಗೂ ಯಾವುದೇ ವ್ಯತ್ಯಾಸವಿಲ್ಲ. ಮತ್ತು ಕೃಷ್ಣನು ಹೇಳುತ್ತಾನೆ, "ನನ್ನ ಪರಿಶುದ್ಧ ಭಕ್ತರು ಎಲ್ಲಿ ಜಪಿಸುತ್ತಾರೋ ನಾನು ಅಲ್ಲಿ ವಾಸಿಸುತ್ತೇನೆ." ಆದ್ದರಿಂದ ಕೃಷ್ಣ ಬಂದಾಗ, ಕೃಷ್ಣನು ನಿಮ್ಮ ನಾಲಿಗೆಯ ಮೇಲೆ ಇರುವಾಗ, ನೀವು ಈ ಭೌತಿಕ ಜಗತ್ತಿನಲ್ಲಿ ಬದುಕುತ್ತಿರುವಿರಿ ಎಂದು ಭಾವಿಸುತ್ತೀರಾ? ಇದು ಈಗಾಗಲೇ ವೈಕುಂಠವಾಗಿದೆ, ನೀವು ಜಪವನ್ನು ಅರಪರಾಧವಿಲ್ಲದೆ ಮಾಡಿದರೆ."
|