"ನೀವು ಭಗವಂತನ ನಾಮದಲ್ಲಿ ಯಾವುದಾದರೂ ಒಂದನ್ನು ಜಪಿಸಿದರೂ, ಭಗವಂತನು ಪರಮ ಸತ್ಯನಾಗಿರುವುದರಿಂದ ಅವನ ಮತ್ತು ಅವನ ಹೆಸರಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆದ್ದರಿಂದ, ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ ನೀವು ನೇರವಾಗಿ ಕೃಷ್ಣನೊಂದಿಗೆ ಸಂಪರ್ಕಿಸುತ್ತೀರಿ ಮತ್ತು ಪರಿಶುದ್ಧರಾಗುತ್ತೀರಿ. ಚೇತೋ-ದರ್ಪಣ-ಮಾರ್ಜನಂ ಭವ-ಮಹಾ-ದಾವಾಗ್ನಿ-ನಿರ್ವಾಪಣಂ (ಚೈ.ಚ ಅಂತ್ಯ 20.12, ಶಿಕ್ಷಾಷ್ಠಕ 1). ಸಹಜವಾಗಿ, ಈ ಮಹಾ-ಮಂತ್ರದ ಬಗ್ಗೆ ಎಲ್ಲವನ್ನೂ ವಿವರಿಸುವುದು ಒಂದು ದೀರ್ಘವಾದ ಯೋಜನೆ. ಆದರೆ ಈ ಹುಡುಗರು ಮತ್ತು ಹುಡುಗಿಯರು ಕೇವಲ ಜಪ ಮಾಡುವ ಮೂಲಕ ಹೇಗೆ ಪರಿಶುದ್ಧರಾಗುತ್ತಿದ್ದಾರೆ, ಮತ್ತು ಹೇಗೆ ಪಾರಮಾರ್ಥಿಕ ಭಾವಪರವಶತೆಯಲ್ಲಿ ನರ್ತಿಸುತ್ತಿದ್ದಾರೆ ಎಂದು ನೀವು ಗಮನಿಸಿ, ನಿಮ್ಮ ಜೀವನದಲ್ಲಿಯೂ ಇದನ್ನು ಹೇಗೆ ಪ್ರಯೋಗ ಮಾಡಬಹುದು ಎಂದು ನಮ್ಮಿಂದ ತಿಳಿದುಕೊಂಡರೆ ಸಂತೋಷವಾಗಿರುತ್ತೀರಿ."
|