“ಮಹಿಳೆಯರೇ ಮತ್ತು ಮಹನೀಯರೇ, ಕೃಷ್ಣನ್ನು ಕೃಪಾ-ಸಿಂಧು ಎಂದು ನಮಗೆ ತಿಳಿದಿದೆ, ಕರುಣಾಸಾಗರ, ಹೇ ಕೃಷ್ಣ ಕರುಣಾ-ಸಿಂಧೋ. ದಿನ-ಬಂಧೋ, ಮತ್ತು ಅವನು ಎಲ್ಲಾ ವಿಧೇಯ ಆತ್ಮಗಳ ಸ್ನೇಹಿತ. ದಿನ-ಬಂಧೋ. ದೀನ - ನಾವು ಈ ಭೌತಿಕ ಅಸ್ತಿತ್ವದಲ್ಲಿರುವುದರಿಂದಲೇ ಈ ಪದವನ್ನು ಬಳಸಲಾಗಿದೆ. ನಾವು ತುಂಬಾ ಅಹಂಕಾರದಿಂದ ಮೆರೆಯುತ್ತಿದ್ದೇವೆ - ಸ್ವಲ್ಪ-ಜಲಾ ಮಾತ್ರೇಣ ಸಪರಿ ಫೊರ-ಫೋರಯತೇ. ಸರೋವರದ ಮೂಲೆಯಲ್ಲಿರುವ ಸಣ್ಣ ಮೀನು ಚಡಪಡಿಸುತ್ತಿರುವಂತೆ, ನಮ್ಮ ಸ್ಥಾನ ಏನೆಂದು ನಮಗೆ ತಿಳಿದಿಲ್ಲ. ಈ ಭೌತಿಕ ಜಗತ್ತಿನಲ್ಲಿ ನಮ್ಮ ಸ್ಥಾನವು ಬಹಳ ಅತ್ಯಲ್ಪವಾಗಿದೆ. ಈ ಭೌತಿಕ ಪ್ರಪಂಚವನ್ನು ಶ್ರೀಮದ್-ಭಾಗವತದಲ್ಲಿ… ಅಲ್ಲ… ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಏಕಾಂಶೇನ ಸ್ಥಿತೋ ಜಗತ್ (ಭ.ಗೀ 10.42). ಈ ಭೌತಿಕ ಪ್ರಪಂಚವು ಇಡೀ ಸೃಷ್ಟಿಯ ಅತ್ಯಲ್ಪ ಭಾಗವಾಗಿದೆ. ಅಸಂಖ್ಯಾತ ಬ್ರಹ್ಮಾಂಡಗಳಿವೆ; ನಮಗೆ ಮಾಹಿತಿ ಸಿಗುತ್ತದೆ – ಯಸ್ಯ ಪ್ರಭಾ ಪ್ರಭವತೋ ಜಗದ್-ಅಂಡ-ಕೋಟಿ (ಬ್ರಹ್ಮಸಂಹಿತ. 5.40). ಜಗದ್-ಅಂಡ-ಕೋಟಿ. ಜಗದ್-ಅಂಡ ಎಂದರೆ ಈ ಬ್ರಹ್ಮಾಂಡ. ಆದ್ದರಿಂದ... ಕೋಟಿ ಎಂದರೆ ಅಸಂಖ್ಯಾತ."
|