"ಓತಂ ಪ್ರೋತಂ ಪಟವದ್ ಯತ್ರ ವಿಶ್ವಂ - ಈ ಐಹಿಕ ಸೃಷ್ಟಿಯ ಈ ಬದಿ ಮತ್ತು ಆ ಬದಿಯನ್ನು ದಾರದಿಂದ ನೇಯ್ದ ಹಾಗಿದೆ. ನೇಯ್ದಿರುವ ಬಟ್ಟೆಗೆ ಎರಡು ಬದಿಗಳಿವೆ, ಉದ್ದ ಮತ್ತು ಅಗಲ, ಎರಡೂ ಕಡೆಯೂ ದಾರವಿದೆ. ಹಾಗೆಯೇ, ಸಂಪೂರ್ಣ ಐಹಿಕ ಸೃಷ್ಟಿಯಲ್ಲಿ, ಉದ್ದವಾಗಿ ಮತ್ತು ಅಗಲವಾಗಿ, ಪ್ರಭುವಿನ ಶಕ್ತಿಯು ಕಾರ್ಯನಿರ್ವಹಿಸುತ್ತಿದೆ. ಭಗವದ್ಗೀತೆಯಲ್ಲಿಯೂ ಇದನ್ನು ಹೇಳಲಾಗಿದೆ, ಸೂತ್ರೇ ಮಣಿ-ಗಣಾ ಇವ (ಭ.ಗೀ 7.7). ಒಂದು ದಾರದಲ್ಲಿ ಮಣಿಗಳು ಅಥವಾ ಮುತ್ತುಗಳು ನೇಯ್ದಿರುವಂತೆ… ಕೃಷ್ಣ ಅಥವಾ ಸಂಪೂರ್ಣ ಸತ್ಯವು ದಾರದಂತೆ. ಎಲ್ಲವೂ, ಎಲ್ಲಾ ಗ್ರಹಗಳು, ಭೂಗೋಳಗಳು, ಮತ್ತು ಬ್ರಹ್ಮಾಂಡಗಳು ಯಾವ ದಾರದಲ್ಲಿ ನೇಯಲ್ಪಟ್ಟಿವೆಯೋ ಆ ದಾರವು ಕೃಷ್ಣ."
|