"ಪ್ರಥಮ ದರ್ಜೆಯ ಬ್ರಾಹ್ಮಣನಾದವನು ಪ್ರಥಮ ದರ್ಜೆಯ ಮನುಷ್ಯನು ಎಂಬ ಭಾವನೆಯಿದೆ ಎಂದು ನಮ್ಮ ಅನುಭವ. ಆದರೆ ಅವನಲ್ಲಿ ಇನ್ನೂ ಮಾಲಿನ್ಯವಿದೆ. ಕನಿಷ್ಠ ಈ ಮಾಲಿನ್ಯವಿದೆ: 'ಓಹ್, ನಾನು ಬ್ರಾಹ್ಮಣ, ನಾನು ಬ್ರಾಹ್ಮಣ, ನಾನು ಶ್ರೇಷ್ಟ..., ನಾನು ಎಲ್ಲರಿಗಿಂತಲೂ ದೊಡ್ಡವನು. ನಾನು ಪಂಡಿತ, ಮತ್ತು ನಾನು ಎಲ್ಲಾ ವೇದಗಳನ್ನು ತಿಳಿದಿದ್ದೇನೆ. ನಾನು ಸರ್ವಜ್ಞ. ನಾನು ಬ್ರಹ್ಮನ್ ಅನ್ನು ತಿಳಿದುಕೊಂಡಿರುವೆ. ಏಕೆಂದರೆ ಬ್ರಹ್ಮ ಜಾನಾತೀತಿ ಬ್ರಾಹ್ಮಣಃ, ಆದ್ದರಿಂದ ಅವನಿಗೆ ತಿಳಿದಿದೆ. ಆದರೆ, ಈ ಎಲ್ಲಾ ಗುಣಗಳಿರುವ ಮೊದಲ ದರ್ಜೆಯ ಬ್ರಾಹ್ಮಣನಾದರೂ ಅವನು ಇನ್ನೂ ಕಲುಷಿತನಾಗಿದ್ದಾನೆ ಏಕೆಂದರೆ ಅವನಿಗೆ ಗರ್ವ 'ನಾನು ಇದು, ನಾನು ಇದುʼ ಎಂದು. ಅದು ಭೌತಿಕ ಗುರುತು.”
|