KN/710211 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಮಾತನಾಡುವಾಗ, ಅಂದರೆ ಉಪದೇಶ ನೀಡಲು ಉಪನ್ಯಾಸದಲ್ಲಿ ನೀವು ಮಾತನಾಡುವುದು ಕೂಡ ಜಪವಾಗುತ್ತದೆ. ಮತ್ತು ಸಹಜವಾಗಿ ಶ್ರವಣವಿರುತ್ತದೆ. ನೀವು ಜಪ ಮಾಡಿದರೆ, ಶ್ರವಣವೂ ಕೂಡಿರುತ್ತದೆ. ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ (ಶ್ರೀ. ಭಾ 7.5.23). ಸ್ಮರಣೆ ಕೂಡ ಇದೆ. ಶ್ರೀಮದ್ ಭಾಗವತಂ ಮತ್ತು ಭಗವದ್ಗೀತೆಯ ಎಲ್ಲಾ ನಿರ್ಣಯಗಳನ್ನು ಸ್ಮರಿಸದೆ, ನೀವು ಬೋಧಿಸಲು ಸಾಧ್ಯವಿಲ್ಲ. ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದ ಸೇವನಂ ಅರ್ಚನಂ. ಅರ್ಚನಂ, ಇದು ಅರ್ಚನಂ. ವಂದನಂ, ಅಂದರೆ ಪ್ರಾರ್ಥನೆ ಸಲ್ಲಿಸುವುದು. ‘ಹರೇ ಕೃಷ್ಣ’ ಕೂಡ ಒಂದು ಪ್ರಾರ್ಥನೆ. ಹರೇ ಕೃಷ್ಣ, ಹರೇ ಕೃಷ್ಣ: ಓ ಕೃಷ್ಣ, ಓ ಕೃಷ್ಣನ ಶಕ್ತಿಯೇ, ದಯವಿಟ್ಟು ನಿನ್ನ ಸೇವೆಯಲ್ಲಿ ನನ್ನನ್ನು ತೊಡಗಿಸು.’ ಈ ‘ಹರೇ ಕೃಷ್ಣ’ ಕೂಡ ಒಂದು ಪ್ರಾರ್ಥನೆಯಾಗಿದೆ."
710211 - ಉಪನ್ಯಾಸ SB 06.03.18 - ಗೋರಖ್ಪುರ