KN/710211b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ, ನಾವು ಗಂಭೀರವಾದ ವ್ಯವಹಾರದಲ್ಲಿ ತೊಡಗಬೇಕು; ಆಗ ನಿದ್ರೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ..., ನಾವು ಸೋಮಾರಿಗಳಾದರೆ, ನಮಗೆ ಸಾಕಷ್ಟು ಕೆಲಸವಿಲ್ಲದಿದ್ದರೆ, ಆಗ ನಿದ್ರೆ ಬರುತ್ತದೆ. ಮತ್ತು ಸಾಕಷ್ಟು ಕಾರ್ಯಗಳಿಲ್ಲದೆ, ಆದರೆ ಸಾಕಷ್ಟು ಆಹಾರ ತಿನ್ನುತ್ತಿದ್ದರೆ, ನಿದ್ರೆ ಮಾಡುವುದೆ ಮುಂದಿನ ಫಲಿತಾಂಶವು. ಆದ್ದರಿಂದ, ನಾವು ವಿಷಯಗಳನ್ನು ಸರಿಹೊಂದಿಸಬೇಕು. ನಾವು ಏಳು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು. ರಾತ್ರಿಯಲ್ಲಿ ಆರು ಗಂಟೆಗಳು, ಮತ್ತು ಒಂದು ಗಂಟೆ. ಅಷ್ಟು ಸಾಕು. ವೈದ್ಯಕೀಯ ದೃಷ್ಟಿಕೋನದಿಂದ ಆರು ಗಂಟೆಗಳ ನಿದ್ರೆ ಸಾಕು ಎನ್ನಲಾಗುತ್ತದೆ. ಆರು ತಾಸು. ಆದ್ದರಿಂದ, ಏಳರಿಂದ ಎಂಟು ಗಂಟೆಗಳ ಕಾಲ, ಒಂದು ಗಂಟೆ ಹೆಚ್ಚು ಮಲಗಿದರೆ, ಇಪ್ಪತ್ನಾಲ್ಕು ಗಂಟೆಗಳಲ್ಲಿ ನಾವು ಎಂಟು ಗಂಟೆಗಳ ಕಾಲ ನಿದ್ರಿಸುತ್ತೇವೆ ಎಂದು ಭಾವಿಸೋಣ. ನಂತರ ಹದಿನಾರು ಗಂಟೆಗಳು. ಮತ್ತು ಭಜನೆ ಎರಡು ಗಂಟೆಗಳು. ಹತ್ತು ಗಂಟೆಗಳು. ಮತ್ತು ಸ್ನಾನ ಮಾಡಲು ಮತ್ತು ಉಡುಗೆ ತೊಡಲು ಇನ್ನೂ ಎರಡು ಗಂಟೆಗಳು."
710211 - ಉಪನ್ಯಾಸ SB 06.03.18 - ಗೋರಖ್ಪುರ