"ದುರದೃಷ್ಟವಶಾತ್ ಮಾಯಾವಾದಿಗಳು, ಅವರು ಶಾಸ್ತ್ರ ಜ್ಞಾನದ ಕೊರತೆಯಿಂದಾಗಿ ಅಥವಾ ಅವರ ಹುಚ್ಚಾಟಿಕೆಗಳಿಂದ, ‘ಕೃಷ್ಣ ಅಥವಾ ವಿಷ್ಣು, ಅಥವಾ ಪರಾತ್ಪರ ಸತ್ಯ, ಅವನು ಅವತರಿಸುವಾಗ ಒಂದು ಭೌತಿಕ ದೇಹವನ್ನು ಹೊಂದುತ್ತಾನೆ’, ಎಂದು ಹೇಳುತ್ತಾರೆ. ಅದು ಸತ್ಯವಲ್ಲ. ಕೃಷ್ಣ ಹೇಳುತ್ತಾನೆ, ಸಂಭವಾಮಿ ಆತ್ಮ-ಮಾಯಯಾ (ಭ.ಗೀ 4.6). ಕೃಷ್ಣನು ಭೌತಿಕ ದೇಹವನ್ನು ಹೊಂದುವುದಿಲ್ಲ. ಇಲ್ಲ. ಕೃಷ್ಣನಿಗೆ ಅಂತಹ ಯಾವುದೇ ಭೇದವಿಲ್ಲ, ಭೌತಿಕ… (ಅಸ್ಪಷ್ಟ). ಆದ್ದರಿಂದ, ಕೃಷ್ಣನು ಹೇಳುತ್ತಾನೆ, ‘ಅವಜಾನಂತಿ ಮಾಂ ಮೂಢಾ ಮಾನುಷಿಂ ತನುಮ್ ಆಶ್ರಿತಂ (ಭ.ಗೀ 9.11): ನಾನು ಮನುಷ್ಯನ ರೂಪದಲ್ಲಿ ಕಾಣಿಸಿಕೊಳ್ಳುವ ಅಥವಾ ಅವತರಿಸುವ ಕಾರಣ, ದುಷ್ಟರು ನನ್ನ ಬಗ್ಗೆ ಯೋಚಿಸುತ್ತಾರೆ (ಮಾನವನೆಂದು) ಅಥವಾ ನನ್ನನ್ನು ಅಪಹಾಸ್ಯ ಮಾಡುತ್ತಾರೆ."
|