"ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಕೃಷ್ಣ ಹೇಳುತ್ತಾನೆ, ‘ಕೋಟ್ಯಾಂತರ ಜನರಲ್ಲಿ ಒಬ್ಬನು ಈ ಮಾನವ ರೂಪದಲ್ಲಿ ಪರಿಪೂರ್ಣನಾಗಲು ಪ್ರಯತ್ನಿಸುತ್ತಾನೆ.’ ಎಲ್ಲರೂ ಪ್ರಯತ್ನಿಸುತ್ತಿಲ್ಲ. ಮೊದಲನೆಯದಾಗಿ, ಒಬ್ಬನು ಬ್ರಾಹ್ಮಣನಾಗಬೇಕು ಅಥವಾ ಬ್ರಾಹ್ಮಣ ಅರ್ಹತೆ ಸಂಪಾದಿಸಬೇಕು. ಅದು ಸತ್ವಗುಣದ ಮಟ್ಟ. ಸತ್ವಗುಣದ ಮಟ್ಟವನ್ನು ತಲುಪದ ಹೊರತು, ಪರಿಪೂರ್ಣತೆಯ ಪ್ರಶ್ನೆಯೇ ಇಲ್ಲ. ರಜೋಗುಣ ಮತ್ತು ತಮೋಗುಣಗಳ ಮಟ್ಟದಲ್ಲಿ ಯಾರೂ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಯಾರಿಗೂ ಅರ್ಥವಾಗುವುದಿಲ್ಲ. ಅದು ಏಕೆಂದರೆ ರಜೋಗುಣ ಮತ್ತು ತಮೋಗುಣಗಳ ವ್ಯಸನಿಯು ಯಾವಾಗಲೂ ಅತಿ ದುರಾಸೆ ಮತ್ತು ಕಾಮವುಳ್ಳವನಾಗಿರುತ್ತಾನೆ. ತತೋ ರಜಸ್-ತಮೋ-ಭಾವಃ ಕಾಮ-ಲೋಭಾದಯಶ್ಚ ಯೇ (ಶ್ರೀ.ಭಾ 1.2.19). ಅಜ್ಞಾನ ಮತ್ತು ಮೋಹ ಎಂಬ ಭೌತಿಕ ಗುಣಗಳಿಂದ ಸೋಂಕಿತನಾದವನು ಕಾಮಿ ಮತ್ತು ಲೋಭಿ. ಅಷ್ಟೇ.
|