KN/710214 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಂದು ಇಂಗ್ಲಿಷ್ ಪದವಿದೆ, ‘ವೈವಿಧ್ಯತೆಯೇ ಆನಂದದ ತಾಯಿ’, ಎಂದು. ಎಂಜಾಯ್‌ಮೆಂಟ್. ಆನಂದ ಎಂದರೆ ಎಂಜಾಯ್‌ಮೆಂಟ್. ಆನಂದವು ನಿರಾಕಾರವಾಗಿರಲು ಸಾಧ್ಯವಿಲ್ಲ; ವಿವಿಧತೆ ಇರಬೇಕು. ಅದೇ ಆನಂದ. ವಿವಿಧ ಬಣ್ಣಗಳ ಹೂಗೊಂಚಲು ನೋಡಿದರೆ ತುಂಬಾ ಆನಂದವಾಗುವ ಅನುಭವ ನಿಮಗಿದೆ. ಆದರೆ ಕೇವಲ ಗುಲಾಬಿ ಮಾತ್ರ ಇದ್ದರೆ, ಗುಲಾಬಿ ತುಂಬಾ ಸುಂದರವಾದ ಹೂವಾಗಿದ್ದರೂ ಸಹ, ಅದು ಅಷ್ಟೇನು ಇಷ್ಟವಾಗುವುದಿಲ್ಲ. ಗುಲಾಬಿಯೊಂದಿಗೆ ಕೆಲವು ಹಸಿರು ಎಲೆಗಳು ಮತ್ತು ಹುಲ್ಲು, ಕೀಳು ಗುಣಮಟ್ಟದಾಗಿದ್ದರು ಸಹ, ಜೊತೆಯಿದ್ದರೆ ತುಂಬಾ ಸುಂದರವಾಗಿರುತ್ತದೆ. ಆನಂದದ ಪ್ರಶ್ನೆ ಬಂದಾಗ... ಕೃಷ್ಣನಿಗೆ ರೂಪವಿದೆ, ಸತ್-ಚಿತ್-ಆನಂದ-ವಿಗ್ರಹ (ಬ್ರಹ್ಮ.ಸಂ 5.1), ಶಾಶ್ವತ; ಚಿತ್, ಜ್ಞಾನದಿಂದ ಪೂರ್ಣ; ಮತ್ತು ಆನಂದದಿಂದ ಪೂರ್ಣ, ಪರಮಾನಂದ. ಆನಂದಮಯೋ 'ಭ್ಯಾಸಾತ್, ಎಂದು ವೇದಾಂತ-ಸೂತ್ರ ಹೇಳುತ್ತದೆ."
710214 - ಉಪನ್ಯಾಸ CC Madhya 06.151-154 - ಗೋರಖ್ಪುರ