KN/710214b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ, ನೀವು ನಿಮ್ಮನ್ನು ಕೃಷ್ಣ ಪ್ರಜ್ಞೆಯಲ್ಲಿ ಇರಿಸಿದಾಗ, ನೀವು ಆಧ್ಯಾತ್ಮಿಕ ಶಕ್ತಿಯಲ್ಲಿ ವಾಸಿಸುತ್ತೀರಿ; ಕೃಷ್ಣ ಪ್ರಜ್ಞೆಯಿಲ್ಲದಿದ್ದಾಗ, ಭೌತಿಕ ಶಕ್ತಿಯಲ್ಲಿ ವಾಸಿಸುತ್ತೀರಿ. ನೀವು ಭೌತಿಕ ಶಕ್ತಿಯಲ್ಲಿ ವಾಸಿಸುವಾಗ ನಿಮ್ಮ ಪ್ರಕಾಶಮಾನವಾದ ಗುಣ — ನೀವು ಬೆಂಕಿ, ಕೃಷ್ಣನ ಭಾಗಾಂಶ — ಆ ಬೆಂಕಿ ಬಹುತೇಕ ಆರಿಹೋಗುತ್ತದೆ. ಆದ್ದರಿಂದ, ನಾವು ಕೃಷ್ಣನನ್ನು ಮರೆತುಬಿಡುತ್ತೇವೆ. ಕೃಷ್ಣನೊಂದಿಗಿನ ನಮ್ಮ ಸಂಬಂಧವು ನಶಿಸಲ್ಪಡುತ್ತದೆ. ಆದರೆ, ಬೆಂಕಿ ಅಥವಾ ಕಿಡಿ, ಅದು ಒಣಗಿದ ಹುಲ್ಲಿನ ಮೇಲೆ ಬಿದ್ದರೆ ಕ್ರಮೇಣ ಹುಲ್ಲು ಉರಿಯುತ್ತದೆ. ಆದ್ದರಿಂದ, ನಾವು... ಈ ಭೌತಿಕ ಜಗತ್ತಿನಲ್ಲಿ, ಭೌತಿಕ ಪ್ರಕೃತಿಯ ಮೂರು ಗುಣಗಳಿವೆ. ನಾವು ಸತ್ವಗುಣದೊಂದಿಗೆ ಒಡಗೂಡಿದರೆ, ನಮ್ಮ ಆಧ್ಯಾತ್ಮಿಕ ಶಕ್ತಿಯು ಮತ್ತೆ ಜ್ವಲಿಸುವ ಬೆಂಕಿಯಾಗುತ್ತದೆ.
710214 - ಉಪನ್ಯಾಸ CC Madhya 06.151-154 - ಗೋರಖ್ಪುರ