"ವ್ರಜ-ಜನ-ವಲ್ಲಭ ಗಿರಿ-ವರ-ಧಾರಿ. ಮೊದಲನೇಯ ವ್ಯವಹಾರವು ‘ರಾಧಾ-ಮಾಧವ.’ ಸಹಜವಾಗಿ, ಕೃಷ್ಣನು ಪ್ರತಿಯೊಬ್ಬರ ಬಗ್ಗೆ ಕಾಳಜಿವಹಿಸುತ್ತಾನೆ, ವಿಶೇಷವಾಗಿ ರಾಧಾರಣಿಯ ಬಗ್ಗೆ. ರಾಧಾ-ಮಾಧವ ಕುಂಜ-ಬಿಹಾರಿ, ವೃಂದಾವನದ ವಿಭಿನ್ನ ಕುಂಜಗಳಲ್ಲಿ, ಪೊದೆಗಳಲ್ಲಿ, ರಾಧೆಯ ಜೊತೆ ಆನಂದಿಸುತ್ತಾನೆ. ತದನಂತರ, ‘ಯಶೋದ-ನಂದನ.’ ಮುಂದೆ ಅವನು ತನ್ನ ತಾಯಿಯಾದ ಯಶೋದೆಯನ್ನು ಮೆಚ್ಚಿಸಲು ಬಯಸುತ್ತಾನೆ. ಯಶೋದ-ನಂದನ ವ್ರಜ-ಜನ-ರಂಜನ. ಮತ್ತು ಕೃಷ್ಣನು ವೃಂದಾವನದ ಎಲ್ಲಾ ನಿವಾಸಿಗಳಿಗೆ ಅತ್ಯಂತ ಪ್ರೀತಿಪಾತ್ರನಾದವನ್ನು. ಯಶೋದ ಮತ್ತು ನಂದಮಹಾರಾಜರ ಮಗ. ಎಲ್ಲಾ ಹಿರಿಯರು ಕೃಷ್ಣನನ್ನು ಪ್ರೀತಿಸುತ್ತಾರೆ. ಅವರು ಪ್ರೀತಿಸುತ್ತಾರೆ. ಎಲ್ಲಾ ವಯಸ್ಸಾದ ಹೆಂಗಸರು ಮತ್ತು ಗಂಡಸರು ಕೃಷ್ಣನನ್ನು ಪ್ರೀತಿಸುತ್ತಾರೆ."
|