"ಪ್ರಸ್ತುತ ಸಮಯದಲ್ಲಿ, ಭಾರತವನ್ನು ಅತ್ಯಂತ ಬಡ, ಬಡತನದ ದೇಶ ಎಂದು ಕರೆಯಲಾಗುತ್ತದೆ. ಜನರು ‘ಅವರು ಭಿಕ್ಷುಕರು. ಅವರಿಗೆ ಕೊಡಲು ಏನೂ ಇಲ್ಲ. ಅವರು ಇಲ್ಲಿ ಭಿಕ್ಷೆ ಬೇಡಲು ಬರುತ್ತಾರೆ’, ಎಂದು ಭಾವಿಸುತ್ತಿದ್ದಾರೆ. ವಾಸ್ತವವಾಗಿ, ಭಿಕ್ಷಾಟನೆಯ ಉದ್ದೇಶಕ್ಕಾಗಿಯೆ ನಮ್ಮ ಮಂತ್ರಿಗಳು ಅಲ್ಲಿಗೆ ಹೋಗುತ್ತಾರೆ: ‘ನಮಗೆ ಅಕ್ಕಿ ಕೊಡಿ, ನಮಗೆ ಗೋಧಿ ಕೊಡಿ, ನಮಗೆ ಹಣ ಕೊಡಿ, ನಮಗೆ ಸೈನಿಕರನ್ನು ಕೊಡಿ’; ಇದು ಅವರ ವ್ಯವಹಾರವಾಗಿದೆ. ಆದರೆ ಮೊದಲ ಬಾರಿಗೆ, ಈ ಆಂದೋಲನದ ಮುಖಾಂತರ, ಭಾರತವು ಅವರಿಗೆ ಏನನ್ನಾದರೂ ಕೊಡುತ್ತಿದೆ. ಇದು ಭಿಕ್ಷೆ ಕೇಳುವ ಪ್ರಚಾರವಲ್ಲ; ಇದು ಕೊಡುವ ಪ್ರಚಾರ. ಏಕೆಂದರೆ ಅವರು ಈ ವಸ್ತುವಿಗೆ, ಅಂದರೆ ಕೃಷ್ಣ ಪ್ರಜ್ಞೆಗೋಸ್ಕರ ಹಾತೊರೆಯುತ್ತಿದ್ದಾರೆ. ಅವರು ಈ ಭೌತಿಕ ಪ್ರಜ್ಞೆಯನ್ನು ಸಾಕಷ್ಟು ಅನುಭವಿಸಿದ್ದಾರೆ.”
|