KN/710216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪವಿತ್ರ ನಾಮವನ್ನು ಪಠಿಸುವುದು ಎಷ್ಟು ಶಕ್ತಿಯುತವಾಗಿದೆಯೆಂದರೆ, ಅದು ತಕ್ಷಣವೇ ಜಪಿಸುವವನಿಗೆ ಮುಕ್ತಿ ನೀಡುತ್ತದೆ ಎಂಬುದು ಮುಖ್ಯ ವಿಷಯ. ಆದರೆ ಅವನು ಮತ್ತೆ ಪತನಗೊಳ್ಳುವ ಸಾಧ್ಯತೆ ಇರುವುದರಿಂದ ನಿಯಂತ್ರಕ ತತ್ವಗಳು ಇವೆ. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬನು ಕೇವಲ ಒಮ್ಮೆ ಪವಿತ್ರ ನಾಮವನ್ನು ಅಪರಾಧರಹಿತವಾಗಿ ಜಪಿಸುವ ಮೂಲಕ ಮುಕ್ತನಾದರೆ, ಇನ್ನು ನಿಯಂತ್ರಕ ತತ್ವಗಳನ್ನು ಅನುಸರಿಸುತ್ತಿರುವ ಇತರರ ಬಗ್ಗೆ ಏನು ಹೇಳಬೇಕು. ಇದು ವಿಷಯ. ಅದು… ಅಂದರೆ ‘ಸಹಜಿಯಾ’ಗಳಂತೆ ಅಲ್ಲ. ‘ಜಪವು ಅಷ್ಟು ಶಕ್ತಿಯುತವಾಗಿದ್ದರೆ, ನಾನು ಕೆಲವೊಮ್ಮೆ ಜಪಿಸುತ್ತೇನೆ’, ಎಂದು ಅವನು ಭಾವಿಸುತ್ತಾನೆ. ಆದರೆ ಜಪ ಮಾಡಿದ ನಂತರ, ಅವನು ಮತ್ತೆ ಸ್ವಇಚ್ಛೆಯಿಂದ ಪತನಕ್ಕೆ ಒಳಗಾಗುತ್ತಾನೆ ಎಂದು ಅವನಿಗೆ ತಿಳಿದಿಲ್ಲ. ಇದು ಉದ್ದೇಶಪೂರ್ವಕ, ನನ್ನ ಪ್ರಕಾರ, ಇದು ಉದ್ದೇಶಪೂರ್ವಕ ಅವಿಧೇಯತೆ. ಉದ್ದೇಶಪೂರ್ವಕ ಅವಿಧೇಯತೆ. ಏಕೆಂದರೆ ನನಗೆ ತಿಳಿದಿದೆ, ‘ನಾನು ಪವಿತ್ರ ನಾಮವನ್ನು ಜಪಿಸಿದ್ದೇನೆ. ನನ್ನ ಜೀವನದ ಎಲ್ಲಾ ಪಾಪಪೂರಿತ ಪ್ರತಿಕ್ರಿಯೆ ಈಗ ಕಣ್ಮರೆಯಾಗಿದೆ. ಹಾಗಾದರೆ ನಾನು ಮತ್ತೆ ಪಾಪದ ಚಟುವಟಿಕೆಗಳನ್ನು ಏಕೆ ಮಾಡಲಿ?’ ಇದು ಸ್ವಾಭಾವಿಕ ತೀರ್ಮಾನ."
710216 - ಉಪನ್ಯಾಸ at Krsna Niketan - ಗೋರಖ್ಪುರ