"ಕೃಷ್ಣ ಇಲ್ಲಿದ್ದಾನೆ ಎಂದಿಟ್ಟುಕೊಳ್ಳಿ... ನಾವು ದೇವರಿಗೆ ಎಷ್ಟು ಗೌರವಪೂರ್ವಕವಾಗಿ ನಮಸ್ಕರಿಸುತ್ತೇವೋ ಹಾಗೆಯೇ. ಅಂತೆಯೇ, ದೇವರ ಮೂರ್ತಿಯು ಅರ್ಚ-ಅವತಾರ. ನೀವು ಅರ್ಚ-ಅವತಾರ ಎಂದು ಪೂಜಿಸುತ್ತಿರುವ ದೇವರ ಮೂರ್ತಿಯು, ಅದು ಪೂಜಿಸಬಹುದಾದ ಅವತಾರ ಎಂದರ್ಥ. ಏಕೆಂದರೆ, ನಮ್ಮ ಇಂದಿನ ಕಣ್ಣುಗಳಿಂದ, ಅಂದರೆ ಭೌತಿಕ ಕಣ್ಣುಗಳಿಂದ ನಾವು ಕೃಷ್ಣನನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ, ನಾವು ನೋಡಬಹುದಾದ ಒಂದು ರೂಪದಲ್ಲಿ ಕೃಷ್ಣನು ನಮ್ಮ ಮುಂದೆ ಕಾಣಿಸಿಕೊಂಡಿರುವುದು ಅವನ ಕರುಣೆ. ಅದುವೇ ಕೃಷ್ಣನ ಕರುಣೆ. ಕೃಷ್ಣ ಈ ಮೂರ್ತಿಗಿಂತ ಭಿನ್ನವಾಗಿದ್ದಾನೆ ಎಂದಲ್ಲ. ಅದು ತಪ್ಪು. ಕೃಷ್ಣನ ಶಕ್ತಿ ಏನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗದವರು, ಇದು ಪ್ರತಿಮೆಯಂದು ಭಾವಿಸುತ್ತಾರೆ. ಆದ್ದರಿಂದ, ಅವರು 'ಪ್ರತಿಮಾರಾಧನೆ' ಎಂದು ಹೇಳುತ್ತಾರೆ. ಇದು ಪ್ರತಿಮಾರಾಧನೆಯಲ್ಲ."
|