KN/710217 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಿಮೋಚನೆ ಎಂದರೆ ಪ್ರಸ್ತುತ ಕ್ಷಣದಲ್ಲಿ ಈ ಭೌತಿಕ..., ಈ ಭೌತಿಕ ಜಗತ್ತಿನಲ್ಲಿ, ಅವನು ಭೌತಿಕ ದೇಹವನ್ನು ಸ್ವೀಕರಿಸುತ್ತಿದ್ದಾನೆ, ಆದರೆ ಅವನು ಕೃಷ್ಣನ ಪ್ರಾಮಾಣಿಕ ಸೇವಕನಾದ್ದಾಗ, ಅವನಿಗೆ ಆಧ್ಯಾತ್ಮಿಕ ದೇಹವನ್ನು ನೀಡಲಾಗುವುದು. ಸೈನಿಕನಂತೆ. ಒಬ್ಬ ವ್ಯಕ್ತಿ, ಅವನು ಸೈನಿಕನಲ್ಲದಿದ್ದರೆ ಅವನಿಗೆ ಸಮವಸ್ತ್ರವನ್ನು ನೀಡಲಾಗುವುದಿಲ್ಲ. ಆದರೆ ಅವನು ಸೈನಿಕನಾಗಿ ಸೇವೆಯನ್ನು ಸ್ವೀಕರಿಸಿದ ತಕ್ಷಣ ಅವನಿಗೆ ಸಮವಸ್ತ್ರವನ್ನು ನೀಡಲಾಗುತ್ತದೆ. ಆದ್ದರಿಂದ, ನೀವು ಭೌತಿಕ ಪ್ರಪಂಚದಲ್ಲಿ ವಿವಿಧ ದೇಹಗಳನ್ನು ಸ್ವೀಕರಿಸುತ್ತೀರಿ, ಮತ್ತು ಅದು ಭೂತ್ವ ಭೂತ್ವ ಪ್ರಲೀಯತೆ (ಭ.ಗೀ 8.19). ನೀವು ಒಂದು ರೀತಿಯ ದೇಹವನ್ನು ಸ್ವೀಕರಿಸುತ್ತಿದ್ದೀರಿ, ಮತ್ತು ಅದು ಕಣ್ಮರೆಯಾಗುತ್ತಿದೆ; ಮತ್ತೆ ನೀವು ಇನ್ನೊಂದನ್ನು ಸ್ವೀಕರಿಸಬೇಕು. ಆದರೆ ನೀವು ಸಂಪೂರ್ಣವಾಗಿ ಕೃಷ್ಣ ಪ್ರಜ್ಞೆಯುಳ್ಳವರಾದ ತಕ್ಷಣ, ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ (ಭ.ಗೀ 4.9). ಈ ದೇಹವನ್ನು ತೊರೆದ ನಂತರ, ಅವನು ಈ ಭೌತಿಕ ಪ್ರಪಂಚಕ್ಕೆ ಬರುವುದಿಲ್ಲ. ಅವನು ತಕ್ಷಣವೇ, ಮಾಮ್ ಎತಿ, ಅವನನ್ನು ವರ್ಗಾಹಿಸಲಾಗುತ್ತದೆ. ಹಾಗೆಯೇ, ಅವನು ಆಧ್ಯಾತ್ಮಿಕ ದೇಹವನ್ನು ಸ್ವೀಕರಿಸುತ್ತಾನೆ.”


710217 - ಸಂಭಾಷಣೆ - ಗೋರಖ್ಪುರ