"ಅಜಾಮಿಳ, ಅವನದು ಶುದ್ಧ ಸಂಕೀರ್ತನೆ ಅಲ್ಲ. ಮಂತ್ರವನ್ನು, ಮಹಾ-ಮಂತ್ರವನ್ನು, ಜಪಿಸುವಾಗ ಹತ್ತು ವಿಧದ ಅಪರಾಧಗಳನ್ನು ತಪ್ಪಿಸಲು ನಮಗೆ ಸಲಹೆ ನೀಡುವಂತೆ. ಆದ್ದರಿಂದ, ಅಜಾಮಿಳನಿಗೆ ಅಂತಹ ಯಾವುದೇ ವಿಚಾರ ಇರಲಿಲ್ಲ. ಅವನು ನಾರಾಯಣನ ಪವಿತ್ರ ನಾಮವನ್ನು ಜಪಿಸುತ್ತಿದ್ದೇನೆ ಎಂದು ಎಂದಿಗೂ ಆಲೋಚಿಸಲಿಲ್ಲ. ಈ ವಿಷಯವನ್ನು ಶ್ರೀಧರ ಸ್ವಾಮಿಗಳು ಒತ್ತಿಹೇಳುತ್ತಾರೆ. ಅವನು ಕೇವಲ ‘ನಾರಾಯಣ’ ಎಂಬ ಹೆಸರುಳ್ಳ ತನ್ನ ಮಗನನ್ನು ಕರೆಯಲು ಪ್ರಯತ್ನಿಸಿದ. ಅದು ಪ್ರಾಯಶಃ ಕೀರ್ತನೆಯಾಗಿರಲಿಲ್ಲ. ಆದರೆ ಈ ಕಂಪನವು, ಅತೀಂದ್ರಿಯ ಕಂಪನವು, ಎಷ್ಟು ಶಕ್ತಿಯುತವೆಂದರೆ ಪವಿತ್ರ ನಾಮವನ್ನು ಜಪ ಮಾಡುವ ನಿಯಮಗಳನ್ನು ಅನುಸರಿಸದಿದ್ದರೂ ಕೂಡ ಅವನು ಎಲ್ಲಾ ಪಾಪದ ಪ್ರತಿಕ್ರಿಯೆಯಿಂದ ತಕ್ಷಣವೇ ಮುಕ್ತನಾದ. ಆ ವಿಷಯವನ್ನು ಇಲ್ಲಿ ಒತ್ತಿಹೇಳಲಾಗಿದೆ."
|