KN/720218 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
ನಾವು ಕೃಷ್ಣನೊಂದಿಗೆ ನಮ್ಮ ಶಾಶ್ವತ ಸಂಬಂಧವನ್ನು ಹೊಂದಿದ್ದೇವೆ ಏಕೆಂದರೆ ನಾವೆಲ್ಲರೂ ಕೃಷ್ಣನ ಭಾಗಗಳು.
ಅದು ತಂದೆ ಮತ್ತು ಮಗನಿಗೆ ಅನಾದಿಕಾಲದ ಸಂಬಂಧವಿದ್ದಂತೆ. ಮಗನು ತಂದೆಗೆ ದಂಗೆಯೇಳಬಹುದು, ಆದರೆ ತಂದೆ ಮತ್ತು ಮಗನ ಸಂಬಂಧವನ್ನು ಮುರಿಯಲಾಗುವುದಿಲ್ಲ. ಹಾಗೆಯೇ, ನಾವು ಕೂಡ ಕೃಷ್ಣನೊಂದಿಗೆ ಸಂಬಂಧ ಹೊಂದಿದ್ದೇವೆ. ಕೆಲವು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ, ಅದನ್ನು ನಾವು ಮರೆತಿದ್ದೇವೆ. ಅದು ನಮ್ಮ ಈಗಿನ ನಿಲುವು. ಅದನ್ನು ಮಾಯೆ ಎನ್ನುತ್ತಾರೆ. ಮಾಯೆ ಎಂದರೆ ನಾವು ಕೃಷ್ಣನೊಂದಿಗಿನ ನಮ್ಮ ಸಂಬಂಧವನ್ನು ಮರೆತು ಅನೇಕ ತಪ್ಪು ಸಂಬಂಧಗಳನ್ನು ಸ್ಥಾಪಿಸಿದ್ದೇವೆ. ಈ ಕ್ಷಣದಲ್ಲಿ ನಾನು "ನಾನು ಭಾರತೀಯ" ಎಂದು ಯೋಚಿಸುತ್ತಿದ್ದೇನೆ, ಯಾರೋ "ನಾನು ಅಮೇರಿಕನ್" ಎಂದು ಯೋಚಿಸುತ್ತಿದ್ದಾರೆ, ಯಾರಾದರೂ "ನಾನು ಹಿಂದೂ" ಎಂದು ಯೋಚಿಸುತ್ತಿದ್ದಾರೆ, ಯಾರಾದರೂ "ನಾನು ಮುಸ್ಲಿಂ" ಎಂದು ಯೋಚಿಸುತ್ತಿದ್ದಾರೆ. ಈ ಸಂಬಂಧಗಳೆಲ್ಲವೂ ಸುಳ್ಳು, ಅದು ಮಾಯೆ." |
720218 - ಉಪನ್ಯಾಸ - ವಿಶಾಖಪಟ್ಟಣಂ |