KN/720220b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಈ ಕೃಷ್ಣೋತ್ಕೀರ್ತನೆಯು ಮಂತ್ರಪಠಣ ಮತ್ತು ನೃತ್ಯವು ಧೀರರಿಗೂ ಅಧೀರರಿಗೂ ಬಹಳ ಪ್ರಿಯವಾಗಿದೆ,
ಆದ್ದರಿಂದ ಗೋಸ್ವಾಮಿಗಳು ಎಲ್ಲಾ ವರ್ಗದ ಪುರುಷರಿಗೆ ಪ್ರಿಯರಾಗಿದ್ದರು. ಅವರು ವೃಂದಾವನದಲ್ಲಿ ವಾಸಿಸುತ್ತಿದ್ದರು, ಭಕ್ತರು ಮತ್ತು ಸಾಮಾನ್ಯ ಪುರುಷರು ಸಹ ಅವರನ್ನು ಇಷ್ಟಪಡುತಿದ್ದರು. ಅವರು ಈ ಗೋಸ್ವಾಮಿಗಳನ್ನೂ ಪೂಜಿಸುತ್ತಿದರು. ಪತಿ-ಪತ್ನಿಯರ ನಡುವಿನ ಕೌಟುಂಬಿಕ ಕಲಹದಲ್ಲೂ ಅವರು ಪ್ರಕರಣವನ್ನು ಗೋಸ್ವಾಮಿಗಳಿಗೆ ಉಲ್ಲೇಖಿಸುತ್ತಿದರು. ಅವರು ಸಾಮಾನ್ಯ ಜನರಿಗೆ ತುಂಬಾ ಪ್ರಿಯರಾಗಿದ್ದರು, ಜನರು ತಮ್ಮ ಕೌಟುಂಬಿಕ ಕಲಹವನ್ನು ಒಪ್ಪಿಸಿ ಗೋಸ್ವಾಮಿಗಳು ಏನು ನಿರ್ಧರಿಸಿದರೂ ಅದನ್ನು ಸ್ವೀಕರಿಸುತ್ತಿದರು. ಆದ್ದರಿಂದ "ಧೀರಾಧೀರ-ಜನ-ಪ್ರಿಯೌ", ಪ್ರಿಯ-ಕರೌ ಏಕೆಂದರೆ ಈ ಚಲನೆಯು ತುಂಬಾ ಸಂತೋಷಕರವಾಗಿದೆ ಏಕೆಂದರೆ ಅದು ಎಲ್ಲಿಯಾದರೂ ಆಕರ್ಷಕವಾಗಿರಬಹುದು, ನಾವು ಪ್ರಾಯೋಗಿಕವಾಗಿ ಅನುಭವಿಸುತ್ತೇವೆ ..." |
720220 - ಉಪನ್ಯಾಸ Excerpt at Krsna Caitanya Matha - ವಿಶಾಖಪಟ್ಟಣಂ |