KN/720222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
" ನಾವು ಭೌತಿಕ ಪ್ರಕೃತಿಯ ನಿಯಮಗಳ ಹಿಡಿತದಲ್ಲಿದ್ದೇವೆ ಮತ್ತು ನಮ್ಮ ಕರ್ಮದ ಪ್ರಕಾರ, ನಾವು ವಿವಿಧ ರೀತಿಯ ದೇಹಗಳನ್ನು ಪಡೆಯುತ್ತೇವೆ ಮತ್ತು ಒಂದು ದೇಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತೇವೆ.
ಮತ್ತು ಒಮ್ಮೆ ನಾವು ಜನ್ಮ ಪಡೆದರೆ, ನಾವು ಸ್ವಲ್ಪ ಕಾಲ ಬದುಕುತ್ತೇವೆ, ನಾವು ದೇಹವನ್ನು ಬೆಳೆಸುತ್ತೇವೆ, ನಂತರ ನಾವು ಕೆಲವು ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ, ನಂತರ ದೇಹವು ಕ್ಷೀಣಿಸುತ್ತದೆ ಮತ್ತು ಅಂತಿಮವಾಗಿ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದು ಎಂದರೆ ನೀವು ಇನ್ನೊಂದು ದೇಹವನ್ನು ಸ್ವೀಕರಿಸುತ್ತೀರಿ. ಮತ್ತೆ ದೇಹವು ಬೆಳೆಯುತ್ತಿದೆ, ದೇಹವು ಉಳಿದಿದೆ, ದೇಹವು ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ, ಮತ್ತೆ ಕ್ಷೀಣಿಸುತ್ತಿದೆ ಹಾಗು ಕಣ್ಮರೆಯಾಗುತ್ತದೆ. ಇದು ನಡೆಯುತ್ತಿದೆ. " |
720222 - ಉಪನ್ಯಾಸ to Railway Workers - ವಿಶಾಖಪಟ್ಟಣಂ |